ಶಾಲಾ ವಾರ್ಷಿಕೋತ್ಸವ ಸಂದರ್ಭ ಪ್ರಧಾನಿ ವಿರುದ್ಧ ಅಸಂವಿಧಾನಿಕ ಭಾಷೆ ಬಳಕೆ: ದೂರು ದಾಖಲು

ಶಾಲಾ ವಾರ್ಷಿಕೋತ್ಸವ ಸಂದರ್ಭ ಪ್ರಧಾನಿ ವಿರುದ್ಧ ಅಸಂವಿಧಾನಿಕ ಭಾಷೆ ಬಳಕೆ: ದೂರು ದಾಖಲು

HSA   ¦    Jan 27, 2020 03:01:08 PM (IST)
ಶಾಲಾ ವಾರ್ಷಿಕೋತ್ಸವ ಸಂದರ್ಭ ಪ್ರಧಾನಿ ವಿರುದ್ಧ ಅಸಂವಿಧಾನಿಕ ಭಾಷೆ ಬಳಕೆ: ದೂರು ದಾಖಲು

ಬೆಂಗಳೂರು: ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಂವಿಧಾನಿಕ ಶಬ್ಧಗಳನ್ನು ಬಳಸಿಕೊಂಡಿರುವಂತಹ ಬೀದರ್ ನಗರದ ಶಾಲೆ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೀದರ್ ನಗರದ ನ್ಯೂ ಟೌನ್ ಪೊಲೀಸರು, ಶಾಲಾ ವಾರ್ಷಿಕೋತ್ಸವದ ಪ್ರಹಸನದಲ್ಲಿ ಮೋದಿ ಅವರ ವಿರುದ್ಧ ಅಸಂವಿಧಾನಿಕ ಭಾಷೆ ಬಳಸಿರುವುದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದು, ಇದರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಧಾನಿ ವಿರುದ್ಧ ಅಸಭ್ಯ ಭಾಷೆ ಬಳಸಿದ ಶಾಲೆ ವಿರುದ್ಧ ಕಠಿಣ ಕ್ರಮತ ತೆಗೆದುಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವಾಣ್ ಆದೇಶಿಸಿದ್ದಾರೆ.