ಪಬ್ ನ ಮೂರನೇ ಮಹಡಿಯಿಂದ ಬಿದ್ದು ಪ್ರೇಮಿಗಳಿಬ್ಬರು ದುರ್ಮರಣ

ಪಬ್ ನ ಮೂರನೇ ಮಹಡಿಯಿಂದ ಬಿದ್ದು ಪ್ರೇಮಿಗಳಿಬ್ಬರು ದುರ್ಮರಣ

YK   ¦    Jun 22, 2019 11:02:40 AM (IST)
ಪಬ್ ನ ಮೂರನೇ ಮಹಡಿಯಿಂದ ಬಿದ್ದು ಪ್ರೇಮಿಗಳಿಬ್ಬರು ದುರ್ಮರಣ

ಬೆಂಗಳೂರು: ಪಬ್ ನ ಮೂರನೇ ಮಹಡಿಯಿಂದ ಪ್ರೇಮಿಗಳಿಬ್ಬರು ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ನಗರದ ಚರ್ಚ್ ರೋಡ್ ನಲ್ಲಿ ನಡೆದಿದೆ.

ಶುಕ್ರವಾರ ತಡರಾತ್ರಿ 11.30ಕ್ಕೆ ಪಬ್ ನಲ್ಲಿ ಮದ್ಯಪಾನ ಸೇವನೆ ಮಾಡುತ್ತಿದ್ದ ವೇಳೆ ಕಾಲು ಜಾರಿ ಇಬ್ಬರು ಆಯತಪ್ಪಿ ಕೆಳಗಡೆ ಬಿದಿದ್ದಾರೆ. ತಲೆಗೆ ಗಂಭೀರವಾದ ಗಾಯವಾಗಿದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ.

ಕಬ್ಬನ್ ಪಾರ್ಕ್ ಪೊಲೀಸ್ ಪ್ರಕಾರ, ಇಬ್ಬರು ಮೂರನೇ ಮಹಡಿಯಿಂದ ಕಾಲುಜಾರಿ ಬಿದಿದ್ದಾರೆ. ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತಲೆಗೆ ಗಂಭೀರವಾದ ಗಾಯವಾಗಿದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ.
ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.