ಶಾಸಕರ ಭವನದ 5ನೇ ಮಹಡಿಯಿಂದ ಬಿದ್ದು ನೌಕರ ಸಾವು

ಶಾಸಕರ ಭವನದ 5ನೇ ಮಹಡಿಯಿಂದ ಬಿದ್ದು ನೌಕರ ಸಾವು

YK   ¦    Apr 15, 2019 10:54:56 AM (IST)
ಶಾಸಕರ ಭವನದ 5ನೇ ಮಹಡಿಯಿಂದ ಬಿದ್ದು ನೌಕರ ಸಾವು

ಬೆಂಗಳೂರು: ಶಾಸಕರ ಭವನ ಕಟ್ಟಡದ 5ನೇ ಮಹಡಿಯಿಂದ ಬಿದ್ದು ಶಿವಶಂಕರ್(44) ಎಂಬವರು ಭಾನುವಾರ ಮಧ್ಯಾಹ್ನ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ಶಾಸಕರ ಭವನದಲ್ಲಿರುವ ಟಿಕೆಟ್ ಬುಕ್ಕಿಂಗ್ ಕೌಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಮಾವಳ್ಳಿಯ ಶಿವಶಂಕರ್ ಎಂದು ಗುರುತಿಸಲಾಗಿದೆ. ಎಂದಿನಂತೆ ಕೆಲಸಕ್ಕೆ ಬಂದಿದ್ದ ವೇಳೆ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಶಂಕರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಅನುಮಾನಾಸ್ಪದ ಸಾವಿನ ಸುತ್ತಾ ಪ್ರಶ್ನೆಗಳು ಹುಟ್ಟಿಕೊಂಡಿದೆ.