ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕೊಂದ ನಿರುದ್ಯೋಗಿ ಟೆಕ್ಕಿ

ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕೊಂದ ನಿರುದ್ಯೋಗಿ ಟೆಕ್ಕಿ

HSA   ¦    Mar 21, 2020 11:13:51 AM (IST)
ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕೊಂದ ನಿರುದ್ಯೋಗಿ ಟೆಕ್ಕಿ

ಬೆಂಗಳೂರು: ಕಳೆದ ಕೆಲವು ಸಮಯದಿಂದ ನಿರುದ್ಯೋಗಿಯಾಗಿದ್ದ ಟೆಕ್ಕಿಯೊಬ್ಬ ತನ್ನಿಬ್ಬರು ಮಕ್ಕಳನ್ನು ಕೊಂದ ಹೃದಯ ವಿದ್ರಾವಕ ಘಟನೆಯು ನಗರದಲ್ಲಿ ನಡೆದಿದೆ.

ಹುಲಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಷಯನಗರದಲ್ಲಿ ಈ ಘಟನೆಯು ನಡೆದಿದ್ದು, ಮೃತ ಮಕ್ಕಳು 1 ಮತ್ತು 3ರ ಹರೆಯದವರು ಎಂದು ತಿಳಿದುಬಂದಿದೆ.

35ರ ಹರೆಯದ ಟೆಕ್ಕಿ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕೊಂದಿದ್ದು, ಪತ್ನಿಯು ತನ್ನ ಕೆಲಸ ಮುಗಿಸಿ ಮನೆಗೆ ಬಂದ ವೇಳೆ ಘಟನೆಯು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಟೆಕ್ಕಿಯನ್ನು ಬಂಧಿಸಿದ್ದು, ಪ್ರಾಥಮಿಕ ತನಿಖೆಯಿಂದ ಆತ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.