ರಾಜ್ಯದ 80 ತಾಲೂಕುಗಳು ಪ್ರವಾಹ ಪೀಡಿತ: ಸರ್ಕಾರ ಘೋಷಣೆ

ರಾಜ್ಯದ 80 ತಾಲೂಕುಗಳು ಪ್ರವಾಹ ಪೀಡಿತ: ಸರ್ಕಾರ ಘೋಷಣೆ

HSA   ¦    Aug 10, 2019 07:13:14 PM (IST)
ರಾಜ್ಯದ 80 ತಾಲೂಕುಗಳು ಪ್ರವಾಹ ಪೀಡಿತ: ಸರ್ಕಾರ ಘೋಷಣೆ

ಬೆಂಗಳೂರು: ಭಾರೀ ಮಳೆಯಿಂದಾಗಿ ರಾಜ್ಯದ 17 ಜಿಲ್ಲೆಗಳಲ್ಲಿ 80 ತಾಲೂಕುಗಳು ಪ್ರವಾಹಪೀಡಿತವಾಗಿದೆ ಎಂದು ರಾಜ್ಯ ಸರ್ಕಾರ ಶನಿವಾರ ಘೋಷಣೆ ಮಾಡಿದೆ.

ಆಗಸ್ಟ್ 1ರಿಂದ 9ರ ತನಕ ವಿವಿಧ ಜಿಲ್ಲೆಗಳಲ್ಲಿ ಬಿದ್ದ ಮಳೆ ಹಾಗೂ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ಜಲಾಶಯಗಳಿಂದ ನೀರು ಬಿಟ್ಟ ಕಾರಣದಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದೆ ಎಂದು ಸರ್ಕಾರದ ಪ್ರಕಟಣೆ ಹೇಳಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉಡುಪಿ ಜಿಲ್ಲೆಗಳ ಸಹಿತ ಸುಮಾರು  17 ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಭಾರೀ ನಷ್ಟ ಸಂಭವಿಸಿದೆ. ಈ ಎಲ್ಲಾ ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಲಾಗಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಿದೆ.