ಸೈಬರ್ ಅಪರಾಧ ಪ್ರಕರಣ: ಬೆಂಗಳೂರಿಗೆ 2ನೇ ಸ್ಥಾನ

ಸೈಬರ್ ಅಪರಾಧ ಪ್ರಕರಣ: ಬೆಂಗಳೂರಿಗೆ 2ನೇ ಸ್ಥಾನ

YK   ¦    Nov 06, 2018 06:56:18 PM (IST)
ಸೈಬರ್ ಅಪರಾಧ ಪ್ರಕರಣ: ಬೆಂಗಳೂರಿಗೆ 2ನೇ ಸ್ಥಾನ

ಬೆಂಗಳೂರು: ನಗರಗಳಲ್ಲಿ 2017ಕ್ಕಿಂತ ಈ ಬಾರಿ ಸೈಬರ್ ಅಪರಾಧಗಳು ಶೇ 300ರಷ್ಟು ಹೆಚ್ಚಾಗಿದ್ದು ಅದರಲ್ಲಿ ಆನ್ ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ.

ಇದರಲ್ಲಿ ಬೆಂಗಳೂರು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ ಹೊರ ಹಾಕಿದ ಮಾಹಿತಿಯಿಂದ ತಿಳಿದು ಬಂದಿದೆ.

ನವೆಂಬರ್ 3 ರ ವರೆಗೆ 3.953 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.