ಭವಿಷ್ಯದ ಶಾಂತಿಗಾಗಿ ಚಿತ್ರ ಬಿಡಿಸಿದ ಮಕ್ಕಳು

ಭವಿಷ್ಯದ ಶಾಂತಿಗಾಗಿ ಚಿತ್ರ ಬಿಡಿಸಿದ ಮಕ್ಕಳು

LK   ¦    Nov 14, 2017 05:46:22 PM (IST)
ಭವಿಷ್ಯದ ಶಾಂತಿಗಾಗಿ ಚಿತ್ರ ಬಿಡಿಸಿದ ಮಕ್ಕಳು

ಬೆಂಗಳೂರು: ಮಕ್ಕಳ ದಿನಾಚರಣೆ ಅಂಗವಾಗಿ `ಭವಿಷ್ಯದ ಶಾಂತಿಗಾಗಿ’ ಎಂಬ ವಿಷಯವಾಗಿ ಶಾಲಾ ಮಕ್ಕಳಿಂದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಲಯನ್ಸ್ ಜಿಲ್ಲೆ 317 ಎಫ್ ಹಾಗೂ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಡೆಸಲಾಯಿತು.

ಸುಮಾರು 30ಕ್ಕೂ ಹೆಚ್ಚು ಶಾಲೆಗಳಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆರ್.ಟಿ.ನಗರ ವಿದ್ಯಾಸಂಸ್ಥೆಯ ತಶ್ ವಿಶ್ವಕರ್ಮ ಪ್ರಥಮ ಬಹುಮಾನ ಪಡೆದರೆ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನಾರಾಯಣ ಇ-ಟೆಕ್ನೋಸ್ಕೂಲ್ ವಿನಯ್ ಅಶೋಕ್, ವಿಧೀಶ ಅವರು ಪಡೆದುಕೊಂಡರು.

ಇಲ್ಲಿ ವಿಜೇತರಾದವರನ್ನು ಹಾಗೂ ಅವರು ಬರೆದಿರುವ ಚಿತ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದ ಚಿತ್ರ ಸ್ಪರ್ಧೆ ಆಯ್ಕೆಗಾಗಿ ಕಳುಹಿಸಿಕೊಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಷಾ ಕುಮಾರಿ ವಹಿಸಿದ್ದರು. ಹೆಚ್.ಕೆ. ಗಿರಿಧರ್ ಮತ್ತು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಕೆ. ಸದಾಶಿವ ಶೆಣೈ ಹಾಗೂ ತೀರ್ಪುಗಾರರಾಗಿ ಜ್ಞಾನೇಶ್ ಮಿಶ್ರ, ಲಯನ್ಸ್ ಸಂಸ್ಥೆಯ ಸದಸ್ಯರು ಹಾಗೂ ಪೋಷಕರು ಭಾಗವಹಿಸಿದ್ದರು. 

More Images