ಪತ್ನಿಯ ಅನೈತಿಕ ಸಂಬಂಧ: ನೆರೆಮನೆಯಾಕೆಯ ಮಗು ಕೊಂದ ಪತಿ!

ಪತ್ನಿಯ ಅನೈತಿಕ ಸಂಬಂಧ: ನೆರೆಮನೆಯಾಕೆಯ ಮಗು ಕೊಂದ ಪತಿ!

HSA   ¦    Oct 10, 2018 04:23:42 PM (IST)
ಪತ್ನಿಯ ಅನೈತಿಕ ಸಂಬಂಧ: ನೆರೆಮನೆಯಾಕೆಯ ಮಗು ಕೊಂದ ಪತಿ!

ಬೆಂಗಳೂರು: ಪತ್ನಿಯ ಅನೈತಿಕ ಸಂಬಂಧದ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬ ತನ್ನ ನೆರೆಮನೆಯ ಎರಡೂವರೆ ವರ್ಷದ ಮಗುವನ್ನು ಕೊಂದು, ರಾಜಕಾಲುವೆಗೆ ಎಸೆದಿರುವ ಘಟನೆ ನಡೆದಿದೆ.

ನೀರಿನ ಡ್ರಮ್ ನಲ್ಲಿ ಮುಳುಗಿಸಿ ಮಗುವನ್ನು ಕೊಂದಿದ್ದ ಆರ್ಮುಗಂ(37) ಎಂಬಾತನನ್ನು ಮಂಗಳವಾರ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ಸೆ.30ರಂದು ಮಗುವನ್ನು ಕೊಂದು ರಾಜಕಾಲುವೆಗೆ ಎಸೆದಿದ್ದ. ಸಿಸಿಟಿವಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ.

ಏನಿದು ಘಟನೆ?
ಅಕ್ಕಿತಿಮ್ಮನಹಳ್ಳಿಯಲ್ಲಿ ವಾಸವಿದ್ದ ಆರ್ಮುಗಂನ ನೆರೆಮನೆಯಾಕೆ ಅಭಿರಾಮಿ ಎಂಬಾಕೆ ತನ್ನ ಪತಿಯನ್ನು ಬಿಟ್ಟು ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿಗೆ ಬಂದಿದ್ದಳು. ಆತನ ತಮ್ಮ ಕೂಡ ಅಕ್ಕನೊಂದಿಗೆ ವಾಸಿಸಲು ಬಂದಿದ್ದ. ಈ ವೇಳೆ ಆತನಿಗೆ ಆರ್ಮುಗಂನ ಪತ್ನಿ ಜತೆಗೆ ಸಲುಗೆ ಬೆಳೆದು ಅನೈತಿಕ ಸಂಬಂಧ ಉಂಟಾಗಿದೆ. ಇದು ಆರ್ಮುಗಂನಿಗೆ ತಿಳಿದು, ಆತ ಇಬ್ಬರಿಗೂ ಥಳಿಸಿದ್ದ. ಇದರಿಂದ ಆತನ ಪತ್ನಿ ತವರಿಗೆ ತೆರಳಿದ್ದಳು. ಈ ಸಿಟ್ಟಿನಲ್ಲಿ ಆತ ಅಭಿರಾಮಿ ಮಗುವನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.