ಬಸ್-ಬೈಕ್ ಅಪಘಾತ: ಮೂವರು ದುರ್ಮರಣ, ಹೊತ್ತಿ ಉರಿದ ಬಿಎಂಟಿಸಿ

ಬಸ್-ಬೈಕ್ ಅಪಘಾತ: ಮೂವರು ದುರ್ಮರಣ, ಹೊತ್ತಿ ಉರಿದ ಬಿಎಂಟಿಸಿ

YK   ¦    Feb 11, 2019 04:31:09 PM (IST)
 ಬಸ್-ಬೈಕ್ ಅಪಘಾತ: ಮೂವರು ದುರ್ಮರಣ, ಹೊತ್ತಿ ಉರಿದ ಬಿಎಂಟಿಸಿ

ಬೆಂಗಳೂರು: ಬಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದು ಮೂವರು ಸಾವನ್ನಪ್ಪಿದ ಘಟನೆ ಬೆಂಗಳೂರು ದಕ್ಷಿಣ ತಾಲ್ಲುಕಿನ ದೇವಿಗೆರೆ ಬಳಿ ಸೋಮವಾರ ನಡೆದಿದೆ.

ಡಿಕ್ಕಿಯ ರಭಸಕ್ಕೆ ಬಿಎಂಟಿಸಿ ಬಸ್ ಹಾಗೂ ಬೈಕ್ ಗೆ ಬೆಂಕಿ ಹತ್ತಿಕೊಂಡಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು.

ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.