ನಾಳೆಯವರೆಗೆ ತಮಿಳುನಾಡಿಗೆ ನೀರು ಬಿಡುವುದು ಬೇಡ: ಸರ್ವಪಕ್ಷ ಸಭೆ ಸಲಹೆ

ನಾಳೆಯವರೆಗೆ ತಮಿಳುನಾಡಿಗೆ ನೀರು ಬಿಡುವುದು ಬೇಡ: ಸರ್ವಪಕ್ಷ ಸಭೆ ಸಲಹೆ

Sep 28, 2016 03:43:40 PM (IST)

ಬೆಂಗಳೂರು: ನಾಳೆಯವರೆಗೆ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದು ಬೇಡ ಎಂದು ಸರ್ವಪಕ್ಷ ಸಭೆಯಲ್ಲಿ ಬುಧವಾರ ಒಕ್ಕೋರಲಿನ ನಿರ್ಣಯ ಕೈಗೊಳ್ಳಲಾಗಿದೆ.


ತಮಿಳುನಾಡಿಗೆ ಮತ್ತೆ ಮೂರು ದಿನಗಳ 18 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನಲೆಯಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಈ ನಿರ್ಣಯ  ಕೈಗೊಳ್ಳಲಾಗಿದೆ. ವಿಧಾನಸೌಧದಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ನಾಳೆಯವರೆಗೂ ನೀರು ಬಿಡದಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ನಾಳೆ ದೆಹಲಿಯ ಶ್ರಮಶಕ್ತಿ ಭವನದಲ್ಲಿ ಕೇಂದ್ರ ಸಚಿವೆ ಉಮಾ ಭಾರತಿ ನೇತೃತ್ವದಲ್ಲಿ ಕಾವೇರಿ ಸಂಧಾನ ಸಭೆ ನಡೆಯಲಿದ್ದು, ಅಲ್ಲಿಯವರೆಗೂ ಕಾದು ನೋಡಿ ಎಂದು ಸಭೆ ರಾಜ್ಯ ಸರ್ಕಾರಕ್ಕೆ  ಸಲಹೆ ನೀಡಿದೆ.

ಸರ್ವಪಕ್ಷ ನಾಯಕರ ಸಲಹೆಗಳನ್ನು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಲಿದೆ. ಅಂತೆಯೇ ಅಡ್ವಕೇಟ್ ಜನರಲ್  ಅವರು ಕೂಡ ಸಲಹೆ ನೀಡಿದ್ದಾರೆ. ಎರಡೂ ಕಡೆಯ ಸಲಹೆಗಳನ್ನು ಸರ್ಕಾರ ಪರಿಗಣಿಸಿ ಸೂಕ್ತ ಸಲಹೆಯನ್ನು ಮಂತ್ರಿ ಪರಿಷತ್ ನಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.