ವಿದ್ಯಾರ್ಥಿಯ ಕೈ ಮೇಲೆ ಲೇಡಿ ಕಂಡಕ್ಟರ್‌ಳ ಹಲ್ಲಿನ ಗುರುತು !

ವಿದ್ಯಾರ್ಥಿಯ ಕೈ ಮೇಲೆ ಲೇಡಿ ಕಂಡಕ್ಟರ್‌ಳ ಹಲ್ಲಿನ ಗುರುತು !

Sep 29, 2016 08:00:32 PM (IST)

ಬೆಂಗಳೂರು: ನಗರದ ಗಂಗಮ್ಮನ ಗುಡಿಯ ಕಮ್ಮಗೊಂಡನಹಳ್ಳಿ ಬಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿ ಹಾಗೂ ಲೇಡಿ ಕಂಡಕ್ಟರ್ ನಡುವೆ ಬಸ್ ಪಾಸ್ ವಿಚಾರವಾಗಿ ಗಲಾಟೆ ನಡೆದು ನಿರ್ವಾಹಕಿ ವಿದ್ಯಾರ್ಥಿಯ ಕೈ ಕಚ್ಚಿರುವ ಘಟನೆ ಇಂದು ನಡೆದಿದೆ.ಬಸ್ ಪಾಸ್ ಗೆ ಸಂಬಂಧ ಪಟ್ಟಂತೆ ವಿದ್ಯಾರ್ಥಿಗಳೊಂದಿಗೆ ಜಗಳಕ್ಕೆ ಇಳಿದ ಲೇಡಿ ಕಂಡಕ್ಟರ್, ಆವೇಶಗೊಂಡು ವಿದ್ಯಾರ್ಥಿಯ ಕೈ ಕಚ್ಚಿದ ಪರಿಣಾಮ ವಿದ್ಯಾರ್ಥಿಯ ಎಡಗೈ ತೋಳಿನ ಮೇಲೆ ನಿರ್ವಾಹಕಿಯ ಹಲ್ಲಿನ ಗುರುತು ಕೂಡಾ ಮೂಡಿ ಬಂದಿದೆ ಎಂದು ಹೇಳಲಾಗುತ್ತಿದೆ.

ಜನ ಸೇರಿದ್ದರೂ, ಟ್ರಾಫಿಕ್ ಪೊಲೀಸ್ ಬಂದು ಸಮಾಧಾನ ಪಡಿಸಿದರೂ ಲೆಕ್ಕಿಸದ ಕಂಡಕ್ಟರ್ ವಿದ್ಯಾರ್ಥಿಯ ಕೈಯನ್ನು ಕಚ್ಚಿ, ಇನ್ನೊಬ್ಬನನ್ನೂ ಕಚ್ಚಲು ಮುಂದಾಗಿದ್ದು, ಕೂಡಲೇ ಅವರನ್ನು ಕೆಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.