ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದಾಗಿ ಅತಿವೃಷ್ಠಿ: ಸಿ.ಟಿ.ರವಿ

ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದಾಗಿ ಅತಿವೃಷ್ಠಿ: ಸಿ.ಟಿ.ರವಿ

HSA   ¦    Jul 11, 2018 02:48:43 PM (IST)
ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದಾಗಿ ಅತಿವೃಷ್ಠಿ: ಸಿ.ಟಿ.ರವಿ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮದುವೆ ಮಾಡಿಕೊಂಡಿರುವ ಕಾರಣದಿಂದಾಗಿ ಅತಿವೃಷ್ಠಿಯಾಗಿದೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಅವರು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಹಲವಾರು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದ ಅತಿವೃಷ್ಠಿ ಉಂಟಾಗಿದೆ. ಇದಕ್ಕೆಲ್ಲಾ ರಾಜ್ಯ ಸರ್ಕಾರವೇ ಕಾರಣ ಎಂದು ರವಿ ಹೇಳಿದರು.

ಜನರು ಮಳೆಯಾಗಲು ಕತ್ತೆಗಳು, ಕಪ್ಪೆಗಳಿಗೆ ಮದುವೆ ಮಾಡುತ್ತಾರೆ. ಆದರೆ ಈ ಸಲ ಜೆಡಿಎಸ್ ಮತ್ತು ಕಾಂಗ್ರೆಸ್ ಮದುವೆಯಾಗಿರುವ ಕಾರಣದಿಂದ ಭಾರೀ ಮಳೆಯಾಗಿ ಹಾನಿಯಾಗಿದೆ ಎಂದು ಸದನದಲ್ಲಿ ಮಳೆಹಾನಿ ಬಗ್ಗೆ ನಡೆದ ಚರ್ಚೆ ವೇಳೆ ವ್ಯಂಗ್ಯ ಮಾಡಿದರು.