ಇಡಿಯ ಕಸ್ಟಡಿಯಲ್ಲಿರುವ ಡಿಕೆಶಿಗೆ ರಾಗಿಮುದ್ದೆ ತಂದ ಪತ್ನಿ, ಮಗಳು

ಇಡಿಯ ಕಸ್ಟಡಿಯಲ್ಲಿರುವ ಡಿಕೆಶಿಗೆ ರಾಗಿಮುದ್ದೆ ತಂದ ಪತ್ನಿ, ಮಗಳು

YK   ¦    Sep 09, 2019 10:32:00 AM (IST)
 ಇಡಿಯ ಕಸ್ಟಡಿಯಲ್ಲಿರುವ ಡಿಕೆಶಿಗೆ ರಾಗಿಮುದ್ದೆ ತಂದ ಪತ್ನಿ, ಮಗಳು

ಬೆಂಗಳೂರು: ದೆಹಲಿ ನಿವಾಸದಲ್ಲಿ ಅಕ್ರಮ ಹಣ ದೊರೆತ ಪ್ರಕರಣ ಸಂಬಂಧ ಬಂಧಿಯಾಗಿ ಇಡಿ ಕಸ್ಟಡಿಯಲ್ಲಿರುವ ಕಾಂಗ್ರೆಸ್ ನಾಯಕ, ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಭಾನುವಾರ ಅವರ ಪತ್ನಿ ಹಾಗೂ ಮಗಳು ಭೇಟಿಯಾದರು. ಈ ವೇಳೆ ಅವರನ್ನು ನೋಡಿ ಡಿಕೆಶಿ ಬಾವುಕರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ನವದೆಹಲಿಯ ತುಘಲಕ್ ರೋಡ್ ಪೊಲೀಸ್ ಠಾಣೆಯಲ್ಲಿ ಡಿಕೆಶಿಯನ್ನು ಅವರ ಕುಟುಂಬದವರು ಭೇಟಿಯಾದರು.

 ಮೂಲಗಳ ಪ್ರಕಾರ ಡಿಕೆಶಿ ಅವರಿಗೆ ಇಷ್ಟವಾದ ರಾಗಿ ಮುದ್ದೆ ಹಾಗೂ ಚಿಕನ್ ರಸಂ ನ್ನು ಮಡದಿ ಉಷಾ ಮಾಡಿ ತಂದಿದ್ದರು. ಸುಮಾರು ಒಂದೂವರೆ ಗಂಟೆ ಕಾಲ ಡಿಕೆಶಿ ಜತೆ ಮಾತುಕತೆ ನಡೆಸಿದರು ಎನ್ನಲಾಗಿದೆ.

ಇಂದು ಇಡಿ ಡಿಕೆಶಿಯನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.