ನನ್ನನ್ನು ಅವಮಾನಿಸಿದವರಿಗೆ ತಕ್ಕ ಪಾಠ: ಸುಮಲತಾ ಅಂಬರೀಷ್

ನನ್ನನ್ನು ಅವಮಾನಿಸಿದವರಿಗೆ ತಕ್ಕ ಪಾಠ: ಸುಮಲತಾ ಅಂಬರೀಷ್

HSA   ¦    May 24, 2019 03:07:22 PM (IST)
ನನ್ನನ್ನು ಅವಮಾನಿಸಿದವರಿಗೆ ತಕ್ಕ ಪಾಠ: ಸುಮಲತಾ ಅಂಬರೀಷ್

ಬೆಂಗಳೂರು: ಮಂಡ್ಯದ ಜನರು ಮೋಸಕ್ಕೆ ಮರಳಾಗದೆ ಪ್ರೀತಿಗೆ ಮರಳಾಗಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಸುಮಲತಾ ಅಂಬರೀಷ್ ತಿಳಿಸಿದರು.

ಗುರುವಾರ ಭರ್ಜರಿ ಗೆಲುವು ದಾಖಲಿಸಿಕೊಂಡ ಬಳಿಕ ಶುಕ್ರವಾರ ಇಲ್ಲಿರುವ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ನನ್ನನ್ನು ಅವಮಾನಿಸಿದರಿಗೆ ಇದು ತಕ್ಕ ಪಾಠ ಕಲಿಸಿದೆ. ಇದು ಮಂಡ್ಯದ ಸ್ವಾಭಿಮಾನದ ಗೆಲುವು ಎಂದು ಅವರು ಹೇಳಿದರು.

ಅಂಬರೀಷ್ ಅವರ ಕನಸನ್ನು ನನಸು ಮಾಡುವುದು ನನ್ನ ಕೆಲಸ. ಅವರ ಹಾದಿಯಲ್ಲಿ ಸಾಗುತ್ತೇನೆ ಎಂದರು.