ಜನಾರ್ದನ ರೆಡ್ಡಿ ಮನೆ ಮೇಲೆ ಸಿಸಿಬಿ ಪೊಲೀಸ್ ದಾಳಿ: ಮಾವನ ವಿಚಾರಣೆ

ಜನಾರ್ದನ ರೆಡ್ಡಿ ಮನೆ ಮೇಲೆ ಸಿಸಿಬಿ ಪೊಲೀಸ್ ದಾಳಿ: ಮಾವನ ವಿಚಾರಣೆ

YK   ¦    Nov 08, 2018 10:29:49 AM (IST)
ಜನಾರ್ದನ ರೆಡ್ಡಿ ಮನೆ ಮೇಲೆ ಸಿಸಿಬಿ ಪೊಲೀಸ್ ದಾಳಿ: ಮಾವನ ವಿಚಾರಣೆ

ಬಳ್ಳಾರಿ: ಮಾಚಿ ಸಚಿವ ಜನಾರ್ದನ ರೆಡ್ಡಿ ಅವರ ಬಳ್ಳಾರಿ ನಿವಾಸದ ಮೇಳೆ ಸಿಸಿಬಿ ಪೊಲೀಸ್ ಅಧಿಕಾರಿ ಮಂಜುನಾಥ ಚೌಧರಿ ನೇತೃತ್ವದ ತಂಡ ಗುರುವಾರ ಬೆಳಿಗ್ಗೆ ದಾಳಿ ನಡೆಸಿದ.

ಹತ್ತು ಮಂದಿಯ ಅಧಿಕಾರಿಗಳ ತಂಡ ಬೆಂಗಳೂರಿನಿಂದ ಎರಡು ವಾಹನಗಳಲ್ಲಿ ನಗರದ ಹವಂಬಾವಿಯ ರೆಡ್ಡಿಯ ನಿವಾಸದ ಮೇಲೆ ದಾಳಿ ನಡೆಸಿದ್ದು ರೆಡ್ಡಿ ಅವರ ಮಾವ ಪರಮೇಶ್ವರ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿದ್ದಾರೆ.

 

 ರದ್ದಾದ ನೋಟುಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ಆರೋಪದಡಿಯಲ್ಲಿ ರೆಡ್ಡಿ ಮೂವರು ಆಪ್ತರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಅದಲ್ಲದೆ ಜನಾರ್ದನ ರೆಡ್ಡಿ ವಿಚಾರಣೆಗೆ ಸಿಸಿಬಿ ತಂಡವು ಏಕಕಾಲದಲ್ಲಿ ಬೆಂಗಳೂರಿನ ಪಾರಿಜಾತ ಅಪಾರ್ಟ್ ಮೆಂಟ್ ಟ್ವಿನ್ ಟವರ್, ಮೊಳಕಾಲ್ಮೂರು ತೋಟದ ಮನೆ, ಬಳ್ಳಾರಿಯಲ್ಲಿಯೂ ದಾಳಿ ನಡೆಸಿದೆ.

ನಿನ್ನೆಯಿಂದ ಜನಾರ್ದನ ರೆಡ್ಡಿ ನಾಪತ್ತೆಯಾಗಿದ್ದಾರೆ.

ಬಂಧನಕ್ಕಾಗಿ ಸಿಸಿಬಿ ಬಲೆ ಬೀಸಿದ್ದು ಜನಾರ್ದನ ರೆಡ್ಡಿ ಅವರ ಮೊಬೈಲ್ ನೆಟ್ ವರ್ಕ್ ನ್ನು ಬಳಸಿ ಕಾರ್ಯಾಚರಣೆ ನಡೆಯುತ್ತಿದೆ. ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.