ರಾಜ್ಯಪಾಲರಾಗಿ ವಜುಬಾಯಿ ವಾಲಾ ಅವಧಿ ಮುಕ್ತಾಯ

ರಾಜ್ಯಪಾಲರಾಗಿ ವಜುಬಾಯಿ ವಾಲಾ ಅವಧಿ ಮುಕ್ತಾಯ

YK   ¦    Sep 09, 2019 02:47:56 PM (IST)
ರಾಜ್ಯಪಾಲರಾಗಿ ವಜುಬಾಯಿ ವಾಲಾ ಅವಧಿ ಮುಕ್ತಾಯ

ಬೆಂಗಳೂರು: ರಾಜ್ಯಪಾಲ ವಜುಬಾಯಿ ವಾಲಾ ಅವರ ರಾಜ್ಯಪಾಲ ಅವಧಿ ಶನಿವಾರ 5ಗಂಟೆಗೆ ಮುಕ್ತಾಯಗೊಂಡಿದೆ. ಆದರೆ ಈ ಸಂಬಂಧ ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. 

2014ರ ಸೆಪ್ಟೆಂಬರ್ 1ರಂದು ವಾಲಾ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. 

ಮೂಲಗಳ ಪ್ರಕಾರ, ಕೇಂದ್ರ ಸಚಿವಾಲಯವು ರಾಜ್ಯಕ್ಕೆ ಉಸ್ತುವಾರಿ ರಾಜ್ಯಪಾಲರನ್ನು ಸೋಮವಾರ ಮಧ್ಯಾಹ್ನದ ನಂತರ ನೇಮಿಸಲಿದೆ. ವಾಲಾ ಅವರ ಅವಧಿ ವಿಸ್ತರಣೆ ಮಾಡುವ ಸಾದ್ಯತೆಗಳು ಕಡಿಮೆ ಇದೆ ಎಂದು ತಿಳಿದು ಬಂದಿದೆ.