ಲೈಂಗಿಕ ಕಿರುಕುಳಕ್ಕೆ ನೊಂದ ದಂಪತಿ ಆತ್ಮಹತ್ಯೆಗೆ ಯತ್ನ:ಪತಿ ಸಾವು

ಲೈಂಗಿಕ ಕಿರುಕುಳಕ್ಕೆ ನೊಂದ ದಂಪತಿ ಆತ್ಮಹತ್ಯೆಗೆ ಯತ್ನ:ಪತಿ ಸಾವು

YK   ¦    Jun 14, 2019 03:35:57 PM (IST)
ಲೈಂಗಿಕ ಕಿರುಕುಳಕ್ಕೆ ನೊಂದ ದಂಪತಿ ಆತ್ಮಹತ್ಯೆಗೆ ಯತ್ನ:ಪತಿ ಸಾವು

ಚಿತ್ರದುರ್ಗ: ಪರಪುರಷನ ಲೈಂಗಿಕ ಕಿರುಕುಳಕ್ಕೆ ನೊಂದ ದಂಪತಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪತಿ ಮೈಲಾರಪ್ಪ(40) ಮೃತಪಟ್ಟಿದ್ದು ಪತ್ನಿ ಸರೋಜಮ್ಮ (35) ಸ್ಥಿತಿ ಚಿಂತಾಜನಕವಾಗಿದ್ದು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ್ಮಹತ್ಯೆಗೆ ಶರಣಾಗುವುದಾಗಿ ಹೇಳಿ ಈ ದಂಪತಿ ನಾಪತ್ತೆಯಾಗಿದ್ದರು. ತೋಣಚೇನಹಳ್ಳಿ ಬಳಿ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದರು. ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.