ಐಎಂಎ ಹಗರಣ: ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಲ್ಕರ್ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಅಸ್ತು

ಐಎಂಎ ಹಗರಣ: ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಲ್ಕರ್ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಅಸ್ತು

HSA   ¦    Jan 29, 2020 11:08:18 AM (IST)
ಐಎಂಎ ಹಗರಣ: ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಲ್ಕರ್ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರ ಅಸ್ತು

ಬೆಂಗಳೂರು: ಐಎಂಎ ಹಗರಣದಲ್ಲಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಲ್ಕರ್ ಅವರ ವಿರುದ್ಧ ತನಿಖೆ ಮಾಡಲು ಕೇಂದ್ರೀಯ ತನಿಖಾ ತಂಡ(ಸಿಬಿಐ)ಗೆ ರಾಜ್ಯ ಸರ್ಕಾರವು ಅನುಮತಿ ನೀಡಿದೆ.

ಹೇಮಂತ್ ನಿಂಬಾಲ್ಕರ್ ಅವರು ಐಎಂಎ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸಲು ಮತ್ತು ಸಿಐಡಿಯಲ್ಲಿದ್ದ ವೇಳೆ ಇದಕ್ಕೆ ಕ್ಲೀನ್ ಚೀಟ್ ಕೂಡ ನೀಡಿದ್ದರು. ನಿಂಬಾಲ್ಕರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡಬೇಕು ಎಂದು ಡಿಸೆಂಬರ್ 18ರಂದು ಸಿಬಿಐ ರಾಜ್ಯ ಸಕಾರದ ಅನುಮತಿ ಹೇಳಿತ್ತು.

ಹೇಮಂತ್ ನಿಂಬಾಲ್ಕರ್ ಅವರು ಬೆಳಗಾವಿ ಖಾನಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಲ್ಕರ್ ಅವರ ಪತಿ. ಜಸ್ಟಿಸ್ ಎನ್ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದ ವೇಳೆ ನಿಂಬಾಲ್ಕರ್ ಮನೆಗೆ ದಾಳಿ ನಡೆದಿತ್ತು.