ನನಗ್ಯಾಕೆ ಈ ಶಿಕ್ಷೆ, ಇದು ಸಾವಿಗಿಂತ ಕ್ರೂರ: ಬೇಸರ ವ್ಯಕ್ತಪಡಿಸಿದ ಸ್ಪೀಕರ್

ನನಗ್ಯಾಕೆ ಈ ಶಿಕ್ಷೆ, ಇದು ಸಾವಿಗಿಂತ ಕ್ರೂರ: ಬೇಸರ ವ್ಯಕ್ತಪಡಿಸಿದ ಸ್ಪೀಕರ್

YK   ¦    Feb 11, 2019 12:04:06 PM (IST)
ನನಗ್ಯಾಕೆ ಈ ಶಿಕ್ಷೆ, ಇದು ಸಾವಿಗಿಂತ ಕ್ರೂರ: ಬೇಸರ ವ್ಯಕ್ತಪಡಿಸಿದ ಸ್ಪೀಕರ್

ಬೆಂಗಳೂರು: ಅಪರೇಷನ್ ಕಮಲದ ಆಡಿಯೋ ಕುರಿತು ಮಾತು ಆರಂಭಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಮೂಲಕ ನನ್ನ ಚಾರಿತ್ರ್ಯವಧೆ ಮಾಡಲಾಗುತ್ತಿದೆ. ಇದು ನನ್ನ ಸಾವಿಗಿಂತಲೂ ಕ್ರೂರ ಎಂದು ವಿಧಾನಸಭೆಯಲ್ಲಿ ಆಡಿಯೋ ಚರ್ಚೆ ವೇಳೆ ಸ್ಪೀಕರ್ ಬಾವುಕರಾದರು.

ಆಡಿಯೋದಲ್ಲಿ ಮಾತಾಡಿದ್ದ ಯಾರೆಂದೂ ನನಗೆ ಗೊತ್ತಿಲ್ಲ. ನನಗೆ ಯಾರು ಎಲ್ಲಿಗೆ ಬಂದು ಹಣ ಕೊಟ್ಟಿದ್ದಾರೆ. ಅಷ್ಟು ದೊಡ್ಡ ಮಟ್ಟದ ಹಣವಿಡಲು ಜಾಗವಾದರೂ ಇರಬೇಕಾಲ್ಲವೇ. ನಾನು ಚಿಕ್ಕ ಬಾಡಿಗೆ ಮನೆಯಲ್ಲಿರುವುದು. ಅಕ್ಕಪಕ್ಕಡ ಮನೆಯವರಿಗೆ ನೋವಾಗುತ್ತದೆ ಎಂದು ನನ್ನ ಬಾಡಿಗೆ ಮನೆಗೆ ಬೋರ್ಡ್ ನ್ನು ಹಾಕಿಲ್ಲ ಎಂದು ಹೇಳಿದರು.