ನಮಗೂ ಸಿ.ಡಿ.ಬಿಡುಗಡೆ ಮಾಡಲು ಗೊತ್ತಿದೆ: ಯತ್ನಾಳ್

ನಮಗೂ ಸಿ.ಡಿ.ಬಿಡುಗಡೆ ಮಾಡಲು ಗೊತ್ತಿದೆ: ಯತ್ನಾಳ್

HSA   ¦    Jan 28, 2020 03:37:01 PM (IST)
ನಮಗೂ ಸಿ.ಡಿ.ಬಿಡುಗಡೆ ಮಾಡಲು ಗೊತ್ತಿದೆ: ಯತ್ನಾಳ್

ಬೆಂಗಳೂರು: ಕುಮಾರಸ್ವಾಮಿ ಅವರ ಮಿಣಿ ಮಿಣಿ ಪೌಡರ್ ಎಲ್ಲಿತ್ತೋ ಗೊತ್ತಿಲ್ಲ. ನಾನು ನೋಡಿಲ್ಲ. ಬಿಜೆಪಿಯವರು ಮಾತನಾಡಿದರೆ ವಿಕೃತ ಮನಸ್ಸು ಎಂದು ಹೇಳುತ್ತಾರೆ ಎಂದು ಶಾಸಕ ಬಸವರಾಜ್ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.

ಕುಮಾರಸ್ವಾಮಿ ಅವರು  ಸಿಡಿ ಬಿಡುಗಡೆ ಮಾಡಿರುವರು. ಅದೇ ರೀತಿಯ ಸಿಡಿ ಬಿಡುಗಡೆ ಮಾಡಲು ನಮಗೂ ತಿಳಿದಿದೆ ಎಂದರು.

ಈಗ ರಾಜ್ಯದ ಮಾಧ್ಯಮಗಳಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಬೆಳಗ್ಗಿನಿಂದ ರಾತ್ರಿ ತನಕ ಚರ್ಚೆ ಆಗುತ್ತಲಿದೆ. ಇದರ ಬದಲು ರಾಜ್ಯದ ಸಮಸ್ಯೆಗಳನ್ನು ಮಾಧ್ಯಮದವರು ಚರ್ಚೆ ಮಾಡಬೇಕು ಮತ್ತು ಆದಷ್ಟು ಬೇಗ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಹೇಳಿದರು.

ಕೇವಲ ಸರ್ಕಾರಿ ಸೌಲಭ್ಯ, ವಿಧಾನಸಭೆಯಲ್ಲಿ ಕೂರುವವರಿಗೆ ಸಚಿವ ಸ್ಥಾನ ಬೇಡ. ಪಕ್ಷಕ್ಕೆ ಬಂದವರಿಗೆ ಸಚಿವ ಸ್ಥಾನ ನೀಡಿ. ಯಾಕೆಂದರೆ ಅವರಿಂದಾಗಿ ಪಕ್ಷ ಅಧಿಕಾರಕ್ಕೆ ಬಂದಿದೆ. ಇದಕ್ಕಾಗಿ ಕೆಲವರು ತ್ಯಾಗ ಮಾಡಲಿ ಎಂದು ತಿಳಿಸಿದರು.