ಚೂರಿ ಇರಿದು ಟೆಕ್ಕಿಯ ಬರ್ಬರ ಹತ್ಯೆ

ಚೂರಿ ಇರಿದು ಟೆಕ್ಕಿಯ ಬರ್ಬರ ಹತ್ಯೆ

Oct 10, 2017 04:08:16 PM (IST)
ಚೂರಿ ಇರಿದು ಟೆಕ್ಕಿಯ ಬರ್ಬರ ಹತ್ಯೆ

ಬೆಂಗಳೂರು: ತನ್ನ ಪ್ರಿಯತಮೆಯ ಭೇಟಿಯಾಗಲು ತೆರಳುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ಒಬ್ಬನನ್ನು ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ಚೂರಿ ಇರಿದು ಕೊಲೆ ಮಾಡಿದ ಘಟನೆ ನಗರದ ಮಡಿವಾಲದಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆ 28ರ ಹರೆಯದ ಪ್ರನೊಯ್ ಮಿಶ್ರಾ ಎಂಬಾತನಿಗೆ ಚೂರಿ ಇರಿಯಲಾಗಿದೆ. ರಕ್ತದ ಮಡವಿನಲ್ಲಿದ್ದ ಮಿಶ್ರಾನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಆದರೆ ಆಸ್ಪತ್ರೆಗೆ ತಲುಪಿಸುವ ಮೊದಲೇ ಆತ ಕೊನೆಯುಸಿರೆಳೆದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ.ಬಿ. ಬೋರೇಲಿಂಗಯ್ಯ ಹೇಳಿದರು.

ತನ್ನ ಪ್ರಿಯತಮೆಯನ್ನು ಭೇಟಿಯಾಗಲು ತೆರಳುತ್ತಿದ್ದ ಮಿಶ್ರಾ ಮೇಲೆ ಬೈಕಿನಲ್ಲಿ ಬಂದ ಇಬ್ಬರು ದಾಳಿ ಮಾಡಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದೆ ಮತ್ತು ತನಿಖೆ ಆರಂಭವಾಗಿದೆ. ಒಡಿಸ್ಸಾ ನಿವಾಸಿಯಾಗಿದ್ದ ಮಿಶ್ರಾ ಕಿಸೆಯಲ್ಲಿದ್ದ ಮೊಬೈಲ್ ಹಾಗೂ ಇತರ ದಾಖಲೆಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಅಕ್ಸೆನ್ಚರ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಮಿಶ್ರಾ ಸಹೋದ್ಯೋಗಿಗಳ ವಿಚಾರಣೆ ನಡೆಸಿದ್ದಾರೆ. ಕಂಪೆನಿ ಇದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ವಾರಾಂತ್ಯದ ಬಳಿಕ ಸೋಮವಾರ ಬೆಳಗ್ಗಿನ ಜಾವ ಈ ಹತ್ಯೆ ನಡೆದಿರುವ ಕಾರಣ ಕಂಪೆನಿ ವಿರುದ್ಧ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.