ರಾಜೀನಾಮೆ ಪರ್ವ: ಐವರು ಶಾಸಕರ ರಾಜೀನಾಮೆ ಮಾತ್ರ ಕ್ರಮಬದ್ಧ

ರಾಜೀನಾಮೆ ಪರ್ವ: ಐವರು ಶಾಸಕರ ರಾಜೀನಾಮೆ ಮಾತ್ರ ಕ್ರಮಬದ್ಧ

HSA   ¦    Jul 09, 2019 03:30:26 PM (IST)
ರಾಜೀನಾಮೆ ಪರ್ವ: ಐವರು ಶಾಸಕರ ರಾಜೀನಾಮೆ ಮಾತ್ರ ಕ್ರಮಬದ್ಧ

ಬೆಂಗಳೂರು: ಅತೃಪ್ತ 14 ಮಂದಿ ಶಾಸಕರು ಸಲ್ಲಿಸಿರುವ ರಾಜೀನಾಮೆಯಲ್ಲಿ ಐದು ಮಂದಿಯ ರಾಜೀನಾಮೆ ಮಾತ್ರ ಕ್ರಮಬದ್ಧವಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಮೇಶ್ ಕುಮಾರ್ ಅವರು ಜುಲೈ 6ರಂದು ನಾನು ಮಧ್ಯಾಹ್ನ 12 ಗಂಟೆ ತನಕ ಕಚೇರಿಯಲ್ಲೇ ಇದ್ದೆ. ಆದರೆ ನಾನು ಹೋದ ಬಳಿಕ ಕಚೇರಿ ಕಾರ್ಯದರ್ಶಿಗೆ ಕೊಟ್ಟು ಹೋಗಿದ್ದಾರೆ. ಅದಕ್ಕೆ ಸ್ವೀಕೃತಿ ಪತ್ರ ಕೊಟ್ಟು ಮಂಗಳವಾರ ಪರಿಶೀಲಿಸುತ್ತೇನೆ ಎಂದು ಹೇಳಿದ್ದೆ ಎಂದರು.

ಆನಂದ್ ಸಿಂಗ್, ನಾರಾಯಣ ಗೌಡ, ಪ್ರತಾಪ್ ಗೌಡ, ಗೋಪಾಲಯ್ಯ, ರಾಮಲಿಂಗಾ ರೆಡ್ಡಿ ಅವರ ನಾಮಪತ್ರಗಳು ಮಾತ್ರ ಕ್ರಮಬದ್ಧವಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.