ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಆರಂಭ

ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಆರಂಭ

Nov 13, 2017 03:11:34 PM (IST)
ಬೆಂಗಳೂರಿನಲ್ಲಿ ಕಡಲೆಕಾಯಿ ಪರಿಷೆ ಆರಂಭ

ಬೆಂಗಳೂರು: ಬಸವನಗುಡಿಯಲ್ಲಿ ನಡೆಯುವಂತಹ ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಕೇಂದ್ರ ಸಚಿವ ಅನಂತಕುಮಾರ್ ಅವರು ಸೋಮವಾರ ಚಾಲನೆ ನೀಡಿದ್ದಾರೆ.

ಪರಿಷೆ ಉದ್ಘಾಟನೆ ಮಾಡಿ ಮಾತನಾಡಿದ ಅನಂತ್ ಕುಮಾರ್ ಅವರು, ಬೆಂಗಳೂರಿನಲ್ಲಿದ್ದ ಏಳು ನದಿಗಳಲ್ಲಿ ಒಂದಾಗಿದ್ದ ವೃಷಭಾವತಿಯ ಪುನಶ್ಚೇತಗೊಳಿಸಲು ಕೇಂದ್ರ ಸರ್ಕಾರದಿಂದ ಅನುದಾನ ನೀಡಲು ಮನವಿ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರ ಜತೆಗೂ ಅನುದಾನ ನೀಡಲು ಮನವಿ ಮಾಡುತ್ತೇವೆ ಎಂದರು.

ಬಸವಣ್ಣನ ಅಡಿದಾವರಿಗಳಲ್ಲಿ ವೃಷಭಾವತಿ ನದಿ ಉಗಮ ಸ್ಥಾನವಿದೆ ಎಂದು ಹೇಳಲಾಗುತ್ತದೆ. ಆದರೆ ಈಗ ಅದು ನದಿಯಾಗಿರದೆ ಚರಂಡಿಯಾಗಿದೆ ಎಂದು ಅನಂತ್ ಕುಮಾರ್ ಹೇಳಿದರು.

ಕಡಲೆಕಾಯಿ ಬಡವರ ಬಾದಾಮಿ. ಕಡಲೆಕಾಯಿ ಮಿಠಾಯಿಯಿಂದ ಅಪೌಷ್ಠಿಕತೆ ಹೋಗಲಾಡಿಸಬಹುದು. ಬೆಂಗಳೂರು ತನ್ನ ಸಂಸ್ಕೃತಿ ಮರೆತಿಲ್ಲ ಎಂದು ಮೇಯರ್ ಸಂಪತ್ ರಾಜ್ ಅವರು ಅಭಿಪ್ರಾಯಪಟ್ಟರು.

ಬಸವನಗುಡಿಯಲ್ಲಿ ನಡೆಯುವ ಈ ಪರಿಷೆಯ ವೇಳೆ ಮೊದಲು ದೇವಸ್ಥಾನಕ್ಕೆ ಕಡಲೆಕಾಯಿ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಇದರ ಬಳಿಕ ವಿವಿಧ ಊರುಗಳಿಂದ ಬಂದಿರುವ ಜನರು ಕಡಲೆಕಾಯಿ ವ್ಯಾಪಾರದಲ್ಲಿ ತೊಡಗುವರು. ಇಲ್ಲಿ ಕೇವಲ ಕಡಲೆಕಾಯಿ ಮಾತ್ರವಲ್ಲದೆ ದೊಡ್ಡ ಮಟ್ಟದಲ್ಲಿ ವಸ್ತುಪ್ರದರ್ಶನವನ್ನು ಕೂಡ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಕಡಲೆಕಾಯಿ ಪರಿಷೆಗೆ ಭಾರೀ ಜನ ಸೇರುವ ಸಾಧ್ಯತೆಯಿದೆ.

More Images