ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರಿಗೆ ಈಗಲೂ ಸಿದ್ದರಾಮಯ್ಯನವರೇ ಸಿಎಂ!

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರಿಗೆ ಈಗಲೂ ಸಿದ್ದರಾಮಯ್ಯನವರೇ ಸಿಎಂ!

HSA   ¦    Jun 13, 2018 03:09:49 PM (IST)
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರಿಗೆ ಈಗಲೂ ಸಿದ್ದರಾಮಯ್ಯನವರೇ ಸಿಎಂ!

ಬೆಂಗಳೂರು: ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾಗುತ್ತಾ ಬಂದರೂ ಸರ್ಕಾರಿ ಕಚೇರಿಗಳು ಇನ್ನೂ ಹಿಂದಿನ ಸರ್ಕಾರದ ಗುಂಗಿನಲ್ಲೇ ಇರುವಂತಿದೆ.

ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವೆಬ್ ಸೈಟ್ ನಲ್ಲಿ ಈಗಲೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿ ಹೆಚ್. ಡಿ. ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿದ್ದರೂ ಇಲ್ಲಿ ಮಾತ್ರ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ.

ಸರ್ಕಾರಿ ಇಲಾಖೆಗಳು ತುಂಬಾ ವಿಳಂಬವೆನ್ನುವುದಕ್ಕೆ ಇದು ಒಂದು ತಾಜಾ ಉದಾಹರಣೆಯಾಗಿದೆ.

ಜನರಿಗೆ ಸರ್ಕಾರ ಬದಲಾಗಿರುವುದು ಗೊತ್ತಾಗುವಂತೆ ಇಲಾಖೆಗಳು ಮತ್ತು ಅಧಿಕಾರಿಗಳು ಕೆಲಸ ಮಾಡಬೇಕೆಂದು ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದರೂ ಅಧಿಕಾರಿಗಳು ಮಾತ್ರ ನಿದ್ರೆ ಮಾಡುತ್ತಲಿದ್ದಾರೆ ಎನ್ನುವುದಕ್ಕೆ ಇದೊಂದು ಸಣ್ಣ ಸಾಕ್ಷಿಯಷ್ಟೇ.

ಸರ್ಕಾರದ ಪ್ರಮುಖ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮಹತ್ವದ ಕೆಲಸ ಇಲಾಖೆಯು ಮಾಡುತ್ತದೆ ಎಂದು ತನ್ನ ಬಗ್ಗೆ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದೆ.