ನಾಳೆ ನಲಪಾಡ್ ಜಾಮೀನು ಅರ್ಜಿ ತೀರ್ಪು

ನಾಳೆ ನಲಪಾಡ್ ಜಾಮೀನು ಅರ್ಜಿ ತೀರ್ಪು

HSA   ¦    Jun 13, 2018 07:33:27 PM (IST)
ನಾಳೆ ನಲಪಾಡ್ ಜಾಮೀನು ಅರ್ಜಿ ತೀರ್ಪು

ಬೆಂಗಳೂರು: ನಗರದ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿ ತೀರ್ಪನ್ನು ಹೈಕೋರ್ಟ್ ಜೂ.14(ಗುರುವಾರ)ಕ್ಕೆ ಮುಂದೂಡಿದೆ.

ನಲಪಾಡ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರು ಬುಧವಾರ ವಿಚಾರಣೆ ನಡೆಸಿ ತೀರ್ಪನ್ನು ನಾಳೆಗೆ ಕಾಯ್ದಿರಿಸಿದ್ದಾರೆ.

ಫೆಬ್ರವರಿ 17ರಂದು ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ನಲಪಾಡ್ ಮತ್ತು ಆತನ ಸಂಗಡಿಗರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಇದರ ಬಳಿಕ ಪೊಲೀಸರಿಗೆ ಶರಣಾಗಿದ್ದ ನಲಪಾಡ್ ಜೈಲು ಪಾಲಾಗಿದ್ದ.