ಡಿಎಸ್-ಮ್ಯಾಕ್ಸ್ ಕಲಾಶ್ರೀ ನ್ಯಾಷನಲ್ ಅವಾರ್ಡ್ ಪ್ರದಾನ

ಡಿಎಸ್-ಮ್ಯಾಕ್ಸ್ ಕಲಾಶ್ರೀ ನ್ಯಾಷನಲ್ ಅವಾರ್ಡ್ ಪ್ರದಾನ

LK   ¦    Jun 18, 2017 01:42:21 PM (IST)

ಬೆಂಗಳೂರು: ಡಿಎಸ್-ಮ್ಯಾಕ್ಸ್ ಪ್ರಾಪರ್ಟೀಸ್ ಪೈ. ಲಿಮಿಟೆಡ್ ವತಿಯಿಂದ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ 12 ಮಂದಿ ಸಾಧಕರನ್ನು ಸನ್ಮಾನಿಸಿ ಡಿಎಸ್-ಮ್ಯಾಕ್ಸ್(ಆಖ-ಒಂಘಿ) ಕಲಾಶ್ರೀ ನ್ಯಾಷನಲ್ ಅವಾರ್ಡ್ ನ್ನು ಪ್ರಧಾನ ಮಾಡುತ್ತಿದ್ದು, ಕಾರ್ಯಕ್ರಮ ಜೂನ್ ತಿಂಗಳ 19 ರಂದು ಸಂಜೆ 4ಕ್ಕೆ ನಗರದ ವೈಯ್ಯಾಲಿಕಾವಲ್ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.

ಇದರೊಂದಿಗೆ ಅಂತಾರಾಷ್ಟ್ರೀಯವಾಗಿ ಯೋಗದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಇಬ್ಬರು ಯೋಗ ಗುರುಗಳಿಗೆ ಅವರ ಜೀವಮಾನ ಸಾಧನೆಗಾಗಿ ಡಿಎಸ್-ಮ್ಯಾಕ್ಸ್(ಆಖ-ಒಂಘಿ) ಯೋಗಶ್ರೀ ಪ್ರಶಸ್ತಿಯನ್ನು ಕೂಡ ನೀಡಲಾಗುತ್ತಿದೆ.

ಕಾರ್ಯಕ್ರಮವು ಬೇಲಿ ಮಠದ ಶ್ರೀಗಳಾದ ಶ್ರೀ ಶಿವಾನುಭವ ಚರ ಮೂರ್ತಿ ಶಿವರುದ್ರ ಸ್ವಾಮೀಜಿ, ಶ್ವಾಸ ಗುರು ಶ್ರೀ ವಚನಾನಂದ ಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಜಗತ್ಪ್ರಸಿದ್ಧ ಆಧ್ಯಾತ್ಮಿಕ ಗುರು, ಬರಹಗಾರ, ರೈತ ಹೋರಾಟಗಾರ, ಪೈಲಟ್ ಮಹಾಯೋಗ್ ಪ್ರತಿಷ್ಠಾನದ ಪೈಲಟ್ ಬಾಬ ಅವರು ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಬಿಬಿಎಂಪಿ ಮಹಾಪೌರರಾದ ಜಿ. ಪದ್ಮಾವತಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಮಾಜಿ ಸಚಿವ ರಾಜುಗೌಡ ಪಾಲ್ಗೊಳ್ಳಲಿದ್ದಾರೆ.