ಮಾ.1ರಿಂದ ಕಾಂಗ್ರೆಸ್ ನಿಂದ ಜನಾಶೀರ್ವಾದ ಯಾತ್ರೆ

ಮಾ.1ರಿಂದ ಕಾಂಗ್ರೆಸ್ ನಿಂದ ಜನಾಶೀರ್ವಾದ ಯಾತ್ರೆ

HSA   ¦    Dec 05, 2017 05:28:06 PM (IST)
ಮಾ.1ರಿಂದ ಕಾಂಗ್ರೆಸ್ ನಿಂದ ಜನಾಶೀರ್ವಾದ ಯಾತ್ರೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಲ್ಲೇ ಇದ್ದಂತಹ ಗೊಂದಲ ಕೊನೆಗೊಂಡಿದ್ದು, ಮಾರ್ಚ್ 1ರಿಂದ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಂದಿನ ವಿಧಾನಸಭೆಗೆ ಮೊದಲು ಬಿಜೆಪಿ ಪರಿವರ್ತನಾ ಯಾತ್ರೆ ಹಾಗೂ ಜೆಡಿಎಸ್ ವಿಕಾಸ ಯಾತ್ರೆ ಕೈಗೊಂಡು ರಾಜ್ಯದೆಲ್ಲೆಡೆ ಪ್ರಯಾಣ ಬೆಳೆಸುತ್ತಿದೆ. ಕಾಂಗ್ರೆಸ್ ಕೂಡ ಇದೇ ರೀತಿ ಜನಾಶೀರ್ವಾದ ಯಾತ್ರೆ ನಡೆಸಬೇಕೆಂದು ನಾಯಕರು ಸಲಹೆ ನೀಡಿದ್ದರು. ಅದರೆ ಇದರ ಬಗ್ಗೆ ಗೊಂದಲಗಳಿದ್ದವು. ಆದರೆ ನಿನ್ನೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.1ರಿಂದ ಜನಾಶೀರ್ವಾದ ಯಾತ್ರೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಜಿಲ್ಲಾ ಪ್ರವಾಸ, ಕ್ಷೇತ್ರಗಳಿಗೆ ಪ್ರವಾಸ ಕೈಗೊಂಡ ಬಳಿಕ ಮಾರ್ಚ್ 1ರಿಂದ ಜನಾಶೀರ್ವಾದ ಯಾತ್ರೆ ಆರಂಭಿಸಲಿದ್ದೇವೆ ಎಂದು ಸಿಎಂ ಹೇಳಿದರು.