ವಿಧಾನಸಭೆಯಲ್ಲಿ ಹೈಡ್ರಾಮ: ಮತ್ತಿಬ್ಬರು ಶಾಸಕರ ರಾಜೀನಾಮೆ

ವಿಧಾನಸಭೆಯಲ್ಲಿ ಹೈಡ್ರಾಮ: ಮತ್ತಿಬ್ಬರು ಶಾಸಕರ ರಾಜೀನಾಮೆ

HSA   ¦    Jul 10, 2019 06:09:25 PM (IST)
ವಿಧಾನಸಭೆಯಲ್ಲಿ ಹೈಡ್ರಾಮ: ಮತ್ತಿಬ್ಬರು ಶಾಸಕರ ರಾಜೀನಾಮೆ

ಬೆಂಗಳೂರು: ವಿಧಾನ ಸೌಧದಲ್ಲಿ ಇಂದು ಹೈಡ್ರಾಮ ನಡೆದಿದ್ದು, ರಾಜೀನಾಮೆ ನೀಡಲು ಬಂದಿದ್ದ ಸಚಿವ ಎಂಟಿಬಿ ನಾಗರಾಜ್ ಮತ್ತು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್ ಅವರನ್ನು ಕಾಂಗ್ರೆಸ್ ನಾಯಕರು ಎಳೆದಾಡಿದ ಘಟನೆ ನಡೆಯಿತು.

ರಾಜೀನಾಮೆ ನೀಡಿದ ಸುಧಾಕರ್ ಅವರನ್ನು ಪ್ರಿಯಾಂಕ ಖರ್ಗೆ ಮತ್ತು ದಿನೇಶ್ ಗುಂಡೂರಾವ್ ಮತ್ತಿತರರ ಮುಖಂಡರು ಸುತ್ತುವರಿದು ಮಾತಿನ ಚಕಮಕಿ ನಡೆಸಿ, ಎಳೆದಾಡಿದರು. ಇದರ ಬಳಿಕ ಸಚಿವ ಜಾರ್ಜ್ ಅವರ ಕೊಠಡಿಗೆ ಕರೆದೊಯ್ದು ಸಂಧಾನಕ್ಕೆ ಪ್ರಯತ್ನಿಸಲಾಯಿತು.

ಇಬ್ಬರು ಶಾಸಕರು ರಾಜೀನಾಮೆ ನೀಡಿರುವುದನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ದೃಢಪಡಿಸಿದರು. ಆದರೆ ಇದನ್ನು ಈಗಲೇ ಅಂಗೀಕರಿಸಲು ಆಗಲ್ಲ. ಜುಲೈ 17ರವರೆಗೆ ಸಮಯಾವಕಾಶ ನೀಡಿದ್ದೇನೆ ಎಂದರು.