ಕೆಪಿಎಸ್ಸಿ ಅಕ್ರಮ ಸಾಬೀತು: ನೇಮಕಾತಿ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಕೆಪಿಎಸ್ಸಿ ಅಕ್ರಮ ಸಾಬೀತು: ನೇಮಕಾತಿ ಆದೇಶ ರದ್ದುಗೊಳಿಸಿದ ಹೈಕೋರ್ಟ್

HSA   ¦    Mar 10, 2018 02:12:55 PM (IST)
ಕೆಪಿಎಸ್ಸಿ ಅಕ್ರಮ ಸಾಬೀತು: ನೇಮಕಾತಿ ಆದೇಶ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ ಸಿ)ದಲ್ಲಿ 2011ರ ಸಾಲಿನ ಗ್ರೂಪ್ ಎ ಮತ್ತು ಗ್ರೂಪ್ ಬಿ ಗಜೆಟೆಡ್ ಪ್ರೊಬೆಷನರಿ ಹುದ್ದೆಯ ಆಯ್ಕೆಯಲ್ಲಿ ಭಾರೀ ಅಕ್ರಮ ನಡೆದಿದ್ದು, ಹೈಕೋರ್ಟ್ ಶುಕ್ರವಾರ ಸುಮಾರು 362 ಅಭ್ಯರ್ಥಿಗಳ ನೇಮಕಾತಿ ಆದೇಶ ರದ್ದುಪಡಿಸಿದೆ.

2014ರ ಮಾರ್ಚ್ 21ರಂದು ಕೆಪಿಎಸ್ ಸಿ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿಯು ಕಾನೂನು ಬಾಹಿರವಾಗಿದೆ ಎಎಂದು ನ್ಯಾಯಮೂರ್ತಿ ಎಚ್. ಜಿ. ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠವು ತೀರ್ಪು ನೀಡಿದೆ.

2014ರ ಅಗಸ್ಟ್ 14ರಂದು ಸರ್ಕಾರ ಕೈಗೊಂಡಿದ್ದ ನಿರ್ಧಾರವು ಕಾನೂನು ಬಾಹಿರ. 362 ಅಭ್ಯರ್ಥಿಗಳಿಗೆ ಆದೇಶ ಕೈಸೇರಿದ ಎರಡು ತಿಂಗಳ ಒಳಗಾಗಿ ನೇಮಕಾತಿ ಆದೇಶ ನೀಡಬೇಕು ಎಂದು ಕೆಎಟಿ ರಾಜ್ಯ ಸರ್ಕಾರಕ್ಕೆ 2016ರ ಅಕ್ಟೋಬರ್ ನಲ್ಲಿ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿತ್ತು.

ಆಯ್ಕೆ ಪ್ರಕ್ರಿಯೆಯು ಸೇವಾ ನಿಯಮದ ವ್ಯಾಪ್ತಿಗೆ ಒಳಪಡುವುದರಿಂದ ಈ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಬಾರದು ಎಂದು ಪ್ರತಿವಾದಿಗಳ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿದೆ.