ಮೀಟರ್ ಬಡ್ಡಿ ದಂಧೆಕೋರರ ಮನೆಗಳಿಗೆ ಸಿಸಿಬಿ ದಾಳಿ: ಲಕ್ಷಾಂತರ ರೂ.ವಶ

ಮೀಟರ್ ಬಡ್ಡಿ ದಂಧೆಕೋರರ ಮನೆಗಳಿಗೆ ಸಿಸಿಬಿ ದಾಳಿ: ಲಕ್ಷಾಂತರ ರೂ.ವಶ

HSA   ¦    Oct 10, 2018 06:39:45 PM (IST)
ಮೀಟರ್ ಬಡ್ಡಿ ದಂಧೆಕೋರರ ಮನೆಗಳಿಗೆ ಸಿಸಿಬಿ ದಾಳಿ: ಲಕ್ಷಾಂತರ ರೂ.ವಶ

ಬೆಂಗಳೂರು: ಸಿಸಿಬಿ ಪೊಲೀಸರು ಬುಧವಾರ ನಗರದ ಕೆ.ಆರ್. ಮಾರುಕಟ್ಟೆ ಸಹಿತ ಹಲವೆಡೆ ದಾಳಿ ನಡೆಸಿ 9 ಮಂದಿ ಮೀಟರ್ ಬಡ್ಡಿ ದಂಧೆಕೋರರನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಕೆ.ಆರ್. ಮಾರುಕಟ್ಟೆ ಪ್ರದೇಶ ಸಹಿತ ಮೀಟರ್ ದಂಧೆಕೋರರ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಮೈಕೋಲೇಔಟ್ ಭಾಸ್ಕರ್, ಸುಬ್ರಹ್ಮಣ್ಯ, ಬಾತ್ ರೂಮ್ ವೇಲು ದಾಳಿಗೊಳಗಾದವರಲ್ಲಿ ಪ್ರಮುಖರಾಗಿದ್ದಾರೆ.

69 ಲಕ್ಷ ರೂ. ನಗದು, ವಾಹನ, 258 ಚೆಕ್ ಗಳು, 52 ಆನ್ ಡಿಮ್ಯಾಂಡ್ ನೋಟ್ ಗಳು, ಇಸ್ಟಾಂಪ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.