ಮಧ್ಯಾಹ್ನದ ಊಟಕ್ಕೆ ಒಣ ಸಿಗಡಿ ಚಟ್ನಿ

ಮಧ್ಯಾಹ್ನದ ಊಟಕ್ಕೆ ಒಣ ಸಿಗಡಿ ಚಟ್ನಿ

YK   ¦    Sep 27, 2018 04:04:14 PM (IST)
ಮಧ್ಯಾಹ್ನದ ಊಟಕ್ಕೆ ಒಣ ಸಿಗಡಿ ಚಟ್ನಿ

ಮೀನು ಪ್ರಿಯರಿಗೆ ಸಿಗಡಿ ಅಂದರೆ ಎಲ್ಲರಿಗೆ ಅಚ್ಚು ಮೆಚ್ಚು. ಮಾಂಸಾಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರದಲ್ಲಿ ಸಿಗಡಿಯೂ ಉತ್ತಮವಾದ ಸ್ಥಾನಮಾನವನ್ನು ಪಡೆದಿದೆ. ಕರಾವಳಿಯ ಜನರಿಗೆ ಸಿಗಡಿ ತುಂಬಾ ರುಚಿಕರವಾದ ಆಹಾರವೂ ಹೌದು. ಹಸಿ ಸಿಗಡಿಯಲ್ಲಿ ವಿಧವಿಧವಾದ ಆಹಾರವನ್ನು ತಯಾರಿಸಿದರೆ ಇನ್ನೂ ಒಣ ಸಿಗಡಿಯಿಂದ ಹೊಟ್ಟೆ ತುಂಬ ಊಟ ಮಾಡುವಂತ ಚಟ್ನಿಯನ್ನು ತಯಾರಿಸಿಕೊಳ್ಳಬಹುದು. ಒಣ ಸಿಗಡಿ ಚಟ್ನಿ ತುಂಬಾ ರುಚಿಕರವಾಗಿರುತ್ತದೆ. ಅದನ್ನು ಮಾಡುವ ವಿಧಾನ.


ಬೇಕಾಗುವ ಪದಾರ್ಥಗಳು: 

ಒಣ ಸಿಗಡಿ- 1ಕಪ್
ತೆಂಗಿನ ತುರಿ- 1ಕಪ್
ಕಾಯಿ ಮೆಣಸು- 4
ಹುಣಸೆ ಹಣ್ಣು- ಸ್ವಲ್ಪ
ಉಪ್ಪು ರುಚಿಗೆ
ಬೆಳ್ಳುಳ್ಳಿ- 3 ಸೊಳೆ
ಕತ್ತರಿಸಿದ ಈರುಳ್ಳಿ

ಮೊದಲು ಒಣ ಸಿಗಡಿಯನ್ನು ಸ್ವಲ್ಪ ಹುರಿದಿಟ್ಟುಕೊಳ್ಳಿ. ನಂತರ ಈರುಳ್ಳಿಯನ್ನು ಬಿಟ್ಟ ಮೇಲಿರುವ ಎಲ್ಲ ಪದಾರ್ಥಗಳನ್ನು ಹುರಿದು ನೀರು ಹಾಕದೆ ರುಬ್ಬಿ. ನಂತರ ಕತ್ತರಿಸಿದ ಈರುಳ್ಳಿ ಹಾಗೂ ಹುರಿದ ಒಣ ಸಿಗಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದೀಗ ರುಚಿಕರವಾದ ಒಣ ಸಿಗಡಿ ಚಟ್ನಿ ಸವಿಯಲು ಸಿದ್ಧ. ಮಧ್ಯಾಹ್ನದ ಊಟದ ಜತೆ ತುಂಬಾ ಚೆನ್ನಾಗಿರುತ್ತೆ.