ಪೈನಾಪಲ್ ಕೇಕ್

ಪೈನಾಪಲ್ ಕೇಕ್

Dec 23, 2016 07:09:16 AM (IST)

ಕೇಕ್ ಎಂದರೆ ಎಲ್ಲರಿಗೂ ಇಷ್ಟ. ಕ್ರಿಸ್ಮಸ್ನಲ್ಲಿ ಕ್ರಿಸ್ಮಸ್ ಟ್ರೀಯ ಅಲಂಕಾರ, ಸಿಹಿ ತಿನಿಸು, ಭೂರೀ ಭೋಜನ, ಪೇಯಗಳು ಇದರೊಂದಿಗೆ ಕೇಕ್ಗಳಿಗೂ ತಮ್ಮದೇ ಸ್ಥಾನವಿದೆ. ಕೇಕ್ ಇಲ್ಲದೆ ಕ್ರಿಸ್ಮಸ್ ತಯಾರಿ ಅಸಂಪೂರ್ಣವಾಗಿರುತ್ತದೆ. ಬನ್ನಿ ನಾವು ಇವತ್ತು ಕ್ರಿಸ್ ಮಸ್ ಗೆ ಸ್ಪೇಷಲ್ ಪೈನಾಪಲ್ ಕೇಕ್ ತಯಾರಿಸಿ ಸವಿಯೋಣ.

ಸಾಮಾಗ್ರಿಗಳು
1. ಪೈನಾಪಲ್ - 1/2 ಕಪ್ (ಕತ್ತರಿಸಿದ್ದು)
2. ಸಿಹಿ ಬಿಸ್ಕತ್ತು - 15-16
3. ಕಿತ್ತಳೆ ರಸ - 1/2 ಕಪ್
4. ಕೆನೆ ಹಾಲಿನ ಕ್ರೀಮ್ (ವೈಪ್ಡ್ ಕ್ರೀಮ್) - 2 ಕಪ್ಸ್
5. ಬಾದಾಮ್ ಚಿಕ್ಕಿ - 1/3 ಕಪ್ (ಸಣ್ಣಗೆ ಜಜ್ಜಿದ)
ತಯಾರಿಸುವ ವಿಧಾನ: ಬ್ಲೆಂಡರ್ನಲ್ಲಿ ಕೆನೆ ಹಾಲಿನ ಕ್ರೀಮ್ ಅನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಸಿಹಿ ಬಿಸ್ಕತ್ತುಗಳನ್ನು ಕಿತ್ತಳೆ ರಸದಲ್ಲಿ ಮುಳುಗಿಸಿ ಮತ್ತು ಅದನ್ನು ಚಪ್ಪಟೆ ತಟ್ಟೆಯಲ್ಲಿರಿಸಿ. ಬಿಸ್ಕತ್ತನ್ನು ಹೆಚ್ಚು ಸಮಯ ರಸಲ್ಲಿ ಮುಳುಗಿಸಬೇಡಿ. ಸುಮ್ಮನೆ ಮುಳುಗಿಸಿ ತೆಗೆಯಿರಿ. ಲೇಯರ್ ಸಿದ್ಧವಾಗಿದೆ: ದಪ್ಪನಾಗಿ ಬೀಟ್ ಮಾಡಿರುವ ಕ್ರೀಮ್ನೊಂದಿಗೆ ಲೇಯರ್ ಅನ್ನು ಕವರ್ ಮಾಡಿ. ಕತ್ತರಿಸಿದ ಅನಾನಸ್ ಅನ್ನು ಅದರ ಮೇಲೆ ಹರಡಿ ಪುನಃ ತೆಳುವಾಗಿ ಕ್ರೀಮ್ ಹರಡಿಸಿ. ಈಗ ಬಿಸ್ಕತ್ತಿನೊಂದಿಗೆ ಪುನಃ ಕೇಕ್ ಅನ್ನು ಲೇಯರ್ ಮಾಡಿ. ಇದಕ್ಕಾಗಿ ಪುನಃ ಕಿತ್ತಳೆ ರಸದಲ್ಲಿ ಬಿಸ್ಕತ್ತನ್ನು ಮುಳುಗಿಸಿ ತೆಗೆಯಿರಿ.
ಲೇಯರಿಂಗ್ ಸಂಪೂರ್ಣಗೊಂಡ ನಂತರ, ದಪ್ಪನೆಯ ಕ್ರೀಮ್ನಿಂದ ಕೇಕ್ ಕವರ್ ಮಾಡಿ. ಪ್ರತಿಯೊಂದು ಭಾಗವನ್ನೂ ಕವರ್ ಮಾಡಿ. ಈಗ ಹುಡಿ ಮಾಡಿದ ಚಿಕ್ಕಿಯನ್ನು ಮೇಲೆ ಹರಡಿ. ಕೇಕ್ ಬದಿಗೆ ಅನಾನಸ್ ತುಂಡನ್ನಿಟ್ಟು ಅಲಂಕರಿಸಿ ಮತ್ತು ಕ್ರಂಚಿ ಅನಾನಸ್ ಕೇಕ್ ಸವಿಯಲು ಸಿದ್ಧವಾಗಿದೆ.