ಬೀಸೋ ತಂಗಾಲಿ ಮಧ್ಯೆ ಬಿಸಿಬಿಸಿ ಎಗ್ ಗಾರ್ಲಿಕ್ ಫ್ರೈಡ್ ರೈಸ್ ಸವಿಯಿರಿ

ಬೀಸೋ ತಂಗಾಲಿ ಮಧ್ಯೆ ಬಿಸಿಬಿಸಿ ಎಗ್ ಗಾರ್ಲಿಕ್ ಫ್ರೈಡ್ ರೈಸ್ ಸವಿಯಿರಿ

HSA   ¦    Jan 18, 2018 04:16:58 PM (IST)
ಬೀಸೋ ತಂಗಾಲಿ ಮಧ್ಯೆ ಬಿಸಿಬಿಸಿ ಎಗ್ ಗಾರ್ಲಿಕ್ ಫ್ರೈಡ್ ರೈಸ್ ಸವಿಯಿರಿ

ಫ್ರೈಡ್ ರೈಸ್ ಇಂದು ಪ್ರತಿಯೊಂದು ಭಾರತೀಯ ಮನೆಯಲ್ಲಿ ಚಿರಪರಿಚಿತ. ಪಾಶ್ವಾತ್ಯ ಅಡುಗೆಯೊಂದು ಇಂದಿನ ದಿನಗಳಲ್ಲಿ ಭಾರತದ ಪ್ರತಿ ಗಲ್ಲಿ ಗಲ್ಲಿಗಳಲ್ಲಿ ಸಿಗುವುದು. ಇದು ಯುವಜನರಲ್ಲಿ ಕ್ರೇಜ್ ಹುಟ್ಟಿಸಿರುವಂತಹ ಫಾಸ್ಟ್ ಫುಡ್. ಸಂಜೆಯಾಗುತ್ತಿದ್ದಂತೆ ಪ್ರತಿಯೊಂದು ರಸ್ತೆಯಲ್ಲೂ ಫ್ರೈಡ್ ರೈಸ್ ನ ಗಾಡಿಯೊಂದು ನಿಮಗೆ ಸಿಗುವುದು ಗ್ಯಾರಂಟಿ. ಆದರೆ ಮನೆಯಲ್ಲೇ ಇದನ್ನು ತಯಾರಿಸಿ ತಿಂದರೆ ಅದು ಮತ್ತಷ್ಟು ರುಚಿಕರ ಹಾಗೂ ಆರೋಗ್ಯಕರ.

ಇದನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳಿ.
ನಾಲ್ಕು ಮಂದಿಗೆ ಬಡಿಸಬಹುದಾದಷ್ಟು
ತಯಾರಿ ಸಮಯ 10 ನಿಮಿಷ
ಅಡುಗೆ ಸಮಯ 30 ನಿಮಿಷ
ಒಟ್ಟು ಅಡುಗೆ ಸಮಯ 40 ನಿಮಿಷ

ಎಗ್ ಗಾರ್ಲಿಕ್ ಫ್ರೈಡ್ ರೈಸ್ ತಯಾರಿಗೆ ಬೇಕಾಗುವ ಸಾಮಗ್ರಿಗಳು
2 ಚಮಚ ಎಣ್ಣೆ
1 ಚಮಚ ಬೆಳ್ಳುಳ್ಳಿ ಕತ್ತರಿಸಿರುವುದು.
2 ಚಮಚ ಎಸಲು ಈರುಳ್ಳಿ
1 ಚಮಚ ಶುಂಠಿ ಕತ್ತರಿಸಿರುವುದು
1 ಕೆಂಪು ಮೆಣಸು ಕತ್ತರಿಸಿರುವುದು
1 ಮೊಟ್ಟೆ
2 ಕಪ್ ಬೇಯಿಸಿದ ಅನ್ನ
1 ಚಮಚ ಉಪ್ಪು
1 ಚಮಚ ಕರಿಮೆಣಸಿನ ಹುಡಿ
1 ಚಮಚ ಸೋಯಾ ಸಾಸ್

ಮಾಡುವ ವಿಧಾನ
* ಹದ ಬೆಂಕಿಯಲ್ಲಿ ಒಂದು ಬಾಣಲೆಯಿಟ್ಟು ಎಣ್ಣೆ ಹಾಕಿ. ಇದಕ್ಕೆ ಕತ್ತರಿಸಿಕೊಂಡಿರುವ ಬೆಳ್ಳುಳ್ಳಿ ಹಾಕಿ. ಇದು ಕಂದು ಬಣ್ಣಕ್ಕೆ ತಿರುಗುವ ತನಕ ಫ್ರೈ ಮಾಡಿ.
* ಇದಕ್ಕೆ ಒಂದು ಚಮಚ ಎಸಲು ಈರುಳ್ಳಿ, ಶುಂಠಿ ಮತ್ತು ಕೆಂಪು ಮೆಣಸು ಹಾಕಿ. ಒಂದು ನಿಮಿಷ ಹುರಿಯಿರಿ.
* ಬಾಣಲೆಗೆ ಮೊಟ್ಟೆ ಹಾಕಿ. ಇದು ಬೇಯುವ ತನಕ ಮಿಶ್ರಣ ಮಾಡುತ್ತಿರಿ.
* ಬೇಯಿಸಿದ ಅನ್ನ ಹಾಕಿ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ.
* ಉಪ್ಪು, ಕರಿಮೆಣಸಿನ ಹುಡಿ ಮತ್ತು ಸಾಯ ಸಾಸ್ ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಮತ್ತೆ ಒಂದು ಚಮಚ ಎಸಲು ಈರುಳ್ಳಿ ಹಾಕಿಕೊಂಡು ಮತ್ತೆ ಒಂದು ನಿಮಿಷ ಫ್ರೈ ಮಾಡಿ.
* ತಯಾರಾದ ಫ್ರೈಡ್ ರೈಸ್ ನ್ನು ತೆಗೆದು ಪ್ಲೇಟ್ ಗೆ ಹಾಕಿ ಮತ್ತು ಅದರ ಮೇಲೆ ಎಸಲು ಈರುಳ್ಳಿ ಹಾಕಿ ಅಲಂಕರಿಸಿ ಬಡಿಸಿ.