ರುಚಿಕರ ಸ್ಪ್ರಿಂಗ್ ರೋಲ್ ತಯಾರಿ ತುಂಬಾ ಸುಲಭ

ರುಚಿಕರ ಸ್ಪ್ರಿಂಗ್ ರೋಲ್ ತಯಾರಿ ತುಂಬಾ ಸುಲಭ

Oct 31, 2017 02:31:57 PM (IST)
ರುಚಿಕರ ಸ್ಪ್ರಿಂಗ್ ರೋಲ್ ತಯಾರಿ ತುಂಬಾ ಸುಲಭ

ಸಂಜೆಯಾಗುತ್ತಾ ಇರುವಂತೆ ಏನಾದರೂ ತಿನ್ನಬೇಕು ಎನ್ನುವ ಹಂಬಲ ಹೆಚ್ಚಾಗುವುದು ಸಹಜ. ಮಧ್ಯಾಹ್ನ ಊಟ ಮಾಡಿದ ಬಳಿಕ ರಾತ್ರಿಯೂಟದ ನಡುವೆ ಇರುವ ಕೆಲವು ಗಂಟೆಗಳ ವಿರಾಮವು ಹೊಟ್ಟೆ ಚುರುಗುಟ್ಟುವಂತೆ ಮಾಡುವುದು. ಇಂತಹ ಸಮಯದಲ್ಲಿ ಫಾಸ್ಟ್ ಫುಡ್ ತಿನ್ನುವುದು ಹೆಚ್ಚಿನವರಿಗೆ ಅಭ್ಯಾಸವಾಗಿ ಹೋಗಿದೆ. ಆದರೆ ಇದರ ಬದಲು ಮನೆಯಲ್ಲೇ ಕೆಲವೊಂದು ತಿಂಡಿ ತಯಾರಿಸಿ ತಿಂದರೆ ಅದರಿಂದ ಆರೋಗ್ಯ ಕೂಡ ಚೆನ್ನಾಗಿರುವುದು. ಈ ಲೇಖನದಲ್ಲಿ ಸ್ಪ್ರಿಂಗ್ ರೋಲ್ ತಯಾರಿಸುವುದು ಹೇಗೆ ಎಂದು ತಿಳಿಸಲಾಗುವುದು. ಇದನ್ನು ತಯಾರಿಸಿಕೊಂಡು ತಿಂದರೆ ದುಬಾರಿ ಹೋಟೆಲ್ ಬಿಲ್ ಕೊಡಬೇಕಾಗಿಲ್ಲ.

ದೋಸೆಗೆ ಬೇಕಾಗಿರುವ ಸಾಮಗ್ರಿಗಳು
1/2 ಕಪ್ ಅಕ್ಕಿ ಹಿಟ್ಟು
1 ಮೊಟ್ಟೆ
1/4 ಚಮಚ ಉಪ್ಪು
1/4 ಕಪ್ ನೀರು
1/4 ಕಪ್ ಹಾಲು
ಮೂರು ಚಮಚ ಎಣ್ಣೆ. ನೀರು ಎಣ್ಣೆ ಮತ್ತು ಹಾಲನ್ನು ಮಿಶ್ರಣ ಮಾಡಿ.

ಮಸಾಲಕ್ಕೆ
ಒಂದು ಕಪ್ ಕ್ಯಾಬೇಜ್ ಸಣ್ಣಗೆ ಕತ್ತರಿಸಿರುವುದು.
ಒಂದು ಕಪ್ ಮೊಳಕೆ ಈರುಳ್ಳಿ. ಎಲೆಗಳನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
ಒಂದು ಕಪ್ ಕ್ಯಾರೆಟ್
1/2 ಚಮಚ ಉಪ್ಪು
2 ಚಮಚ ಎಣ್ಣೆ
4 ಎಸಲು ಬೆಳ್ಳುಳ್ಳಿ ಚೆನ್ನಾಗಿ ತುಂಡರಿಸಿರುವುದು.
1 ಚಮಚ ಸೋಯಾ ಸಾಸ್
2 ಚಮಚ ಸೆಲೆರಿ ಸಣ್ಣಗೆ ಕತ್ತರಿಸಿರುವುದು.
1 ಚಮಚ ಹಿಟ್ಟು. ನೀರು ಬೆರೆಸಿ ತೆಳು ಮಾಡಿಕೊಳ್ಳಿ.
ಕರಿಯಲು ಎಣ್ಣೆ


ಸ್ಪ್ರಿಂಗ್ ರೋಲ್ ಮಾಡುವ ವಿಧಾನ
*ದೋಸೆ ಹೇಳಿರುವ ಸಾಮಗ್ರಿ ಬಳಸಿಕೊಂಡು ತೆಳುವಾದ ದೋಸೆ ಮಾಡಿಕೊಳ್ಳಿ.
*ಒಂದು ಚಮಚ ಎಣ್ಣೆಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಬಿಸಿ ಮಾಡಿ. ಈರುಳ್ಳಿ ಸ್ವಲ್ಪ ಮೃಧುವಾಗಲಿ.
*ಮಸಾಲೆಗೆ ಹೇಳಿರುವ ಇತರ ಸಾಮಗ್ರಿಗಳನ್ನು ಒಂದೊಂದಾಗಿ ಹಾಕಿ ಐದು ನಿಮಿಷ ಕರಿಯಿರಿ.
*ದೋಸೆ ತೆಗೆದುಕೊಂಡು ಒಂದು ಚಮಚ ಮಸಾಲೆಯನ್ನು ಒಂದು ಬದಿಗೆ ಹಾಕಿ.
*ಮಸಾಲೆ ತುಂಬಿದ ಭಾಗವನ್ನು ಮಡಚಿಕೊಳ್ಳಿ. ಇದರ ಬಳಿಕ ಅಂತ್ಯದ ತನಕ ಸುತ್ತಿ. ಅಂತ್ಯದಲ್ಲಿ ಹಿಟ್ಟಿನ ಪೇಸ್ಟ್ ಹಾಕಿ ಮತ್ತೊಂದು ಬದಿ ಮುಚ್ಚಿ.
*ಎರಡು ಬದಿಯನ್ನು ಪೇಸ್ಟ್ ಹಾಕಿ ಚೆನ್ನಾಗಿ ಮುಚ್ಚಿಕೊಳ್ಳಿ. ಇಲ್ಲವಾದಲ್ಲಿ ಕರಿಯುವಾಗ ಮಸಾಲೆ ಹೊರಬರುವುದು. ಈಗ ಎರಡು ಬದಿ ಕರಿಯಿರಿ.
*ರುಚಿಕರವಾದ ಸ್ಪ್ರಿಂಗ್ ರೋಲ್ ನಿಮ್ಮ ಮುಂದಿದೆ...