ಬೆಳಗ್ಗಿನ ಉಪಹಾರಕ್ಕೆ ಅವಲಕ್ಕಿ ಹುಳಿ

ಬೆಳಗ್ಗಿನ ಉಪಹಾರಕ್ಕೆ ಅವಲಕ್ಕಿ ಹುಳಿ

LK   ¦    Jul 11, 2018 02:24:23 PM (IST)
ಬೆಳಗ್ಗಿನ ಉಪಹಾರಕ್ಕೆ ಅವಲಕ್ಕಿ ಹುಳಿ

ಅವಲಕ್ಕಿ ಇದ್ದರಂತು ಏನಾದರೊಂದು ಪದಾರ್ಥ ಮಾಡಿಬಿಡಬಹುದು. ಅವಲಕ್ಕಿಯಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸುತ್ತಾರೆ. ಅಷ್ಟೇ ಅಲ್ಲ ಅದರಿಂದ ಏನೆಲ್ಲ ಮಾಡಬಹುದು ಎಂದು ಪಾಕ ಪ್ರವೀಣರು ಹೊಸ ರುಚಿಗಳನ್ನು ಹುಡುಕುತ್ತಲೇ ಇರುತ್ತಾರೆ. ಅವಲಕ್ಕಿಯಿಂದ ಮಾಡಬಹುದಾದ ಖಾದ್ಯಗಳಲ್ಲಿ ಅಲವಕ್ಕಿ ಹುಳಿಯೂ ಒಂದಾಗಿದೆ. ಇದನ್ನು ಮಾಡುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಅವಲಕ್ಕಿ ಹುಳಿಗೆ ಬೇಕಾಗುವ ಪದಾರ್ಥಗಳು

ಅವಲಕ್ಕಿ- ಒಂದು ಬಟ್ಟಲು

ಕಾಯಿ ತುರಿ- ಒಂದು ಭಾಗ

ಹುಣಸೆಹಣ್ಣು- ಸ್ವಲ್ಪ

ಹಸಿಮೆಣಸಿನ ಕಾಯಿ-4

ಇಂಗು- ಚಿಟಿಕೆಯಷ್ಟು

ಸಾಸಿವೆ- ಸ್ವಲ್ಪ

ಅರಿಶಿಣ- ಸ್ವಲ್ಪ

ಬೆಲ್ಲ- ಸ್ವಲ್ಪ

ನೆಲಗಡಲೆ- ಸ್ವಲ್ಪ

ಕರಿಬೇವು ಸೊಪ್ಪು

ಅಲವಕ್ಕಿ ಹುಳಿ ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಅವಲಕ್ಕಿಯನ್ನು ತೊಳೆದು ಪುಡಿ ಮಾಡಿಟ್ಟುಕೊಳ್ಳಬೇಕು. ಇನ್ನೊಂದೆಡೆ ಕಾಯಿ, ಹಸಿಮೆಣಸು, ಇಂಗು, ಸಾಸಿವೆ, ಅರಿಶಿಣ, ಹುಣಸೆಹಣ್ಣು, ಬೆಲ್ಲ, ಉಪ್ಪು ಎಲ್ಲವನ್ನು ಹಾಕಿ ರುಬ್ಬಿ ತೆಗೆದಿಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಸ್ವಲ್ಪ ಸಾಸಿವೆ ಹಾಕಿ ಸಿಡಿಸಿ ಅದಕ್ಕೆ ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಬಳಿಕ ನೆಲಕಡಲೆ ಹಾಕಿ ಹುರಿದು ಆ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಸ್ವಲ್ಪ ಬಾಡಿಸಬೇಕು. ಇಷ್ಟು ಮಾಡಿದ ನಂತರ ಅದಕ್ಕೆ ಅವಲಕ್ಕಿಯನ್ನು ಸೇರಿಸಿ ಮಿಕ್ಸ್ ಮಾಡಿದರೆ ಅವಲಕ್ಕಿ ಹುಳಿ ಸವಿಯಲು ಸಿದ್ಧವಾಗುತ್ತದೆ