ಬೆಳ್ತಿಗೆ ಅನ್ನಕ್ಕೆ ದಹಿ ಕಡಿ ಬಡಿಸಿ ಸವಿಯಿರಿ

ಬೆಳ್ತಿಗೆ ಅನ್ನಕ್ಕೆ ದಹಿ ಕಡಿ ಬಡಿಸಿ ಸವಿಯಿರಿ

HSA   ¦    Feb 04, 2018 07:25:37 PM (IST)
ಬೆಳ್ತಿಗೆ ಅನ್ನಕ್ಕೆ ದಹಿ ಕಡಿ ಬಡಿಸಿ ಸವಿಯಿರಿ

ಉತ್ತರ ಭಾರತದಲ್ಲಿ ತುಂಬಾ ಜನಪ್ರಿಯವಾಗಿರುವಂತಹ ದಹಿಕಡಿಯನ್ನು ಪ್ರಮುಖವಾಗಿ ಕಡಲೆ ಹಿಟ್ಟು ಮತ್ತು ಮೊಸರನ್ನು ಬಳಸಿ ತಯಾರಿಸಲಾಗುತ್ತದೆ. ದಹಿಕಡಿಯು ಪ್ರತಿಯೊಂದು ರಾಜ್ಯಕ್ಕೆ ಅನುಗುಣವಾಗಿ ತನ್ನನ್ನು ತಾನು ಪರಿವರ್ತನೆ ಮಾಡಿಕೊಂಡಿದೆ. ಮಹಾರಾಷ್ಟ್ರದಲ್ಲಿ ಮಾಡುವಂತಹ ಕಡಿಯು ಉತ್ತರ ಭಾರತೀಯ ಶೈಲಿಯದ್ದಾಗಿದೆ. ಮಹಾರಾಷ್ಟ್ರದ ಕಡಿಯ ಜತೆಗೆ ಬೆಳ್ತಕ್ಕಿ ಅನ್ನ ಹಾಕಿಕೊಂಡು ಊಟ ಮಾಡಿದರೆ ಮತ್ತಷ್ಟು ಬಡಿಸಿ ಬಡಿಸಿ ತಿನ್ನಬೇಕೆನ್ನುವ ಆಸೆ ಮೂಡುವುದು ನಿಜ.

ಮಹಾರಾಷ್ಟ್ರದ ದಹಿಕಡಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
2 ಚಮಚ ಜೀರಿಗೆ
6-7 ಬೆಳ್ಳುಳ್ಳಿ ಎಸಲು
2 ಚಮಚ ಶುಂಠಿ
2 ಹಸಿರು ಮೆಣಸು

ದಹಿ ಮಿಶ್ರಣಕ್ಕೆ
1 ಕಪ್ ಮೊಸರು
1/2 ಕಪ್ ಕಡಲೆಹಿಟ್ಟು
1 ಕಪ್ ಅರಶಿನ
2 ಚಮಚ ಉಪ್ಪು
1 ಕಪ್ ನೀರು
1 ಚಮಚ ಮೆಂತ್ಯೆ
2 ಕೆಂಪು ಮೆಣಸು
10 ಕರಿಬೇವಿನ ಎಲೆಗಳು
1/2 ಚಮಚ ಇಂಗು

ಮಹಾರಾಷ್ಟ್ರ ಶೈಲಿಯ ದಹಿ ಕಡಿ ತಯಾರಿಸುವ ವಿಧಾನ
1. ಜೀರಿಗೆ, ಬೆಳ್ಳುಳ್ಳಿ ಎಸಲುಗಳು, ಶುಂಢಿ ಮತ್ತು ಹಸಿ ಮೆಣಸನ್ನು ತೆಗೆದುಕೊಂಡು ರುಬ್ಬಿಕೊಂಡು ಪೇಸ್ಟ್ ಮಾಡಿ.

ಮೊಸರು-ಕಡಲೆಹಿಟ್ಟು ಮಿಶ್ರಣ ತಯಾರಿಸಿ
1. ಮೊಸರನ್ನು ಒಂದು ಪಾತ್ರೆಗೆ ಹಾಕಿ ಮತ್ತು ಅದನ್ನು ಸರಿಯಾಗಿ ಕಲಸಿ ತೆಳು ಮಾಡಿ.
2. ಇದಕ್ಕೆ ಕಡಲೆಹಿಟ್ಟು, ಅರಶಿನ ಮತ್ತು ಉಪ್ಪು ಹಾಕಿ.
3. ಎಲ್ಲವನ್ನು ಜತೆಯಾಗಿ ಮಿಶ್ಣ ಮಾಡಿ ಮತ್ತು ನೀರು ಸೇರಿಸಿ. ನಯವಾದ ಮಿಶ್ರಣ ಬರಲು ಸರಿಯಾಗಿ ಕಲಸಿಕೊಳ್ಳಿ.
4. ಆಳ ತಳದ ತವಾಗೆ ಮೆಂತ್ಯೆ, ಕೆಂಪು ಮೆಣಸು, ಕರಿಬೇವಿನ ಎಲೆಗಳು ಮತ್ತು ಇಂಗು ಹಾಕಿಕೊಳ್ಳಿ.
5. ಇದನ್ನು ಸ್ವಲ್ಪ ಕರಿದ ಬಳಿಕ ಮಾಡಿಟ್ಟಿರುವ ಪೇಸ್ಟ್ ಹಾಕಿ ಮತ್ತು ಸರಿಯಾಗಿ ಕಲಸಿ.
6. ಮೊಸರು ಮತ್ತು ಕಡಲೆಹಿಟ್ಟು ಮಿಶ್ರಣ ಇದಕ್ಕೆ ಬೆರೆಸಿ
7. ಸರಿಯಾಗಿ ಕಲಸಿ ತೆಳು ಮಾಡಿಕೊಳ್ಳಿ.
8. ಬೆಳ್ತಿಗೆ ಅನ್ನದೊಂದಿಗೆ ಮಹಾರಾಷ್ಟ್ರ ದಹಿ ಕಡಿ ಬಡಿಸಿ ನೋಡಿ. ಮತ್ತೆ ಮತ್ತೆ ಕೇಳಿ ತಿನ್ನುವರು.