ಊಟದ ಜತೆಗೆ ಎಂದಾದರೂ ‘ಬಟರ್ ಚಿಕನ್’ ಸವಿದಿದ್ದೀರಾ?

ಊಟದ ಜತೆಗೆ ಎಂದಾದರೂ ‘ಬಟರ್ ಚಿಕನ್’ ಸವಿದಿದ್ದೀರಾ?

YK   ¦    Jan 10, 2018 03:14:56 PM (IST)
ಊಟದ ಜತೆಗೆ ಎಂದಾದರೂ ‘ಬಟರ್ ಚಿಕನ್’ ಸವಿದಿದ್ದೀರಾ?

ಬಟರ್ ಚಿಕನ್ ಇದೊಂದು ಭಾರತೀತ ಜಯಪ್ರಿಯ ತಿನಿಸುಗಳಲ್ಲಿ ಒಂದು. ಈ ತಿನಿಸನ್ನು ಮೋತಿ ಮಹಲ್ ಅಡುಗೆ ಮನೆಯಲ್ಲಿ ಕಂಡು ಹಿಡಿಯಲಾಯಿತು ಎಮದು ಹೆಚ್ಚಿನವರು ಹೇಳುತ್ತಾರೆ. ಬಿಸಿ ಬಿಸಿಯಾದ ಬಟರ್ ಚಿಕನ್ ಪದಾರ್ಥದ ಜತೆಗೆ ಊಟವನ್ನು ಸೇವಿಸಿದರೆ ಉತ್ತಮವಾಗಿರುತ್ತದೆ.

‘ಬಟರ್ ಚಿಕನ್’ ಗೆ ಮಿಶ್ರಣ ಮಾಡಲು ಬೇಕಾಗುವ ಸಾಮಾಗ್ರಿಗಳು
700 ಗ್ರಾಂ ಚಿಕನ್
1 ಟೀ ಚಮಚ ಮೆಣಸಿನ ಪುಡಿ
1ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್
ರುಚಿಗೆ ತಕ್ಕಷ್ಟು ಉಪ್ಪು
½ ಮೊಸರು

ಗ್ರೇವಿಗೆ ಬೇಕಾಗುವ ಸಾಮಾಗ್ರಿಗಳು
175 ಗ್ರಾಂ ಬೆಣ್ಣೆ
½ ಟೀ ಚಮಚ ಜೀರಿಗೆ
1/2ಟೀ ಚಮಚ ಸಕ್ಕರೆ
½ ಕೆ.ಜಿ. ಟೊಮೆಟೋ ಪ್ಯೂರಿ
 ರುಚಿಗೆ ಉಪ್ಪು
 100ಗ್ರಾಂ ಫ್ರೆಶ್ ಕ್ರೀಂ
4 ಹಸಿ ಮೆಣಸಿನಕಾಯಿ(ಕಟ್ ಮಾಡಿ ಇಟ್ಟುಕೊಳ್ಳಿ)
1/2 ಟೀ ಚಮಚ ಮೆಂತ್ಯೆ ಸೊಪ್ಪ(ಪುಡಿಮಾಡಿ)
ಮಾಡುವ ವಿಧಾನ:
• ಒಂದು ಮಿಕ್ಸಿಂಗ್ ಬೌಲ್ ಗೆ ಮೆಣಸಿನ ಹುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೊಸರು ಹಾಕಿ ಸರಿಯಾಗಿ ಕಲಸಿ. ಕಲಸಿದ ಮಿಶ್ರಣಕ್ಕೆ ತುಂಡು ಮಾಡಿ ಇಟ್ಟುಕೊಂಡ ಚಿಕನ್ ಹಾಕಿ ಸರಿಯಾಗಿ ಮಿಶ್ರಣ ಮಾಡಿ ರೆಫ್ರಿಜಿರೇಟರ್ ನಲ್ಲಿ ರಾತ್ರಿ ಪೂರ್ತಿ ಅಥವಾ 6ಗಂಟೆ ಕಾಲ ಇಡಿ.

• ನಂತರ ಮಿಶ್ರಣ ಮಾಡಿ ಇಟ್ಟುಕೊಂಡ ಚಿಕನ್ ಅನ್ನು 10-12 ನಿಮಿಷಗಳ ಕಾಲ ಬೇಯಿಸಿ.
ಚಿಕನ್ ಗ್ರೇವಿ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಟೊಮೆಟೋ ಪ್ಯೂರಿ ಹಾಕಿ 2-3 ನಿಮಿಷ ಬೇಯಿಸಿ. ಅದಕ್ಕೆ ಜೀರಿಗೆ, ಸಕ್ಕರೆ, ಮೆಣಸಿನ ಪುಡಿ, ಉಪ್ಪಿ ಹಾಕಿ ಮಿಶ್ರಣ ಮಾಡಿ. ನಂತರ ಅದಕ್ಕೆ ಬೇಯಿಸಿದ ಚಿಕನ್ ಮಿಶ್ರಣ ಮಾಡಿ, ಫ್ರೆಶ್ ಕ್ರೀಂ, ಕಟ್ ಮಾಡಿದ ಹಸಿ ಮೆಣಸಿಕಾಯಿ, ಪುಡಿ ಮಾಡಿದ ಮೆಂತ್ಯೆ ಸೊಪ್ಪು ಹಾಕಿ 3-4 ನಿಮಿಷ ಹುರಿಯಿರಿ. ಚಿಕನ್ ಬೆಂದ ಮೇಲೆ ಉರಿ ಆರಿಸಿ. ಇದೀಗ ಬಿಸಿ ಬಿಸಿಯಾದ ಬಟರ್ ಚಿಕನ್ ಸವಿಯಲು ಸಿದ್ಧ.

 

More Images