ತುಂಬಾ ವಿಶೇಷ ಕಥಲ್ ಬಿರಿಯಾನಿ

ತುಂಬಾ ವಿಶೇಷ ಕಥಲ್ ಬಿರಿಯಾನಿ

Jan 16, 2018 02:46:42 PM (IST)
ತುಂಬಾ ವಿಶೇಷ ಕಥಲ್ ಬಿರಿಯಾನಿ

ಬಿರಿಯಾನಿ ಎಂದರೆ ಕೇವಲ ಕೋಳಿ ಹಾಗೂ ಮಾಂಸ ಹಾಕಿ ಮಾಡುವುದೆಂಬ ಭಾವನೆ ಹೆಚ್ಚಿನವರಲ್ಲಿದೆ. ಆದರೆ ಹಣ್ಣು ತರಕಾರಿಗಳನ್ನು ಹಾಕಿಕೊಂಡು ಬಿರಿಯಾನಿ ತಯಾರಿಸಬಹುದು. ಇಂತಹ ಒಂದು ಬಿರಿಯಾನಿಯಲ್ಲಿ ಕಥಲ್ ಬಿರಿಯಾನಿ ಕೂಡ ಒಂದು. ಕಥಲ್ ಬಿರಿಯಾನಿಯನ್ನು ಹಸಿ ಹಲಸಿನ ಹಣ್ಣನ್ನು ಬಳಸಿ ತಯಾರಿಸಲಾಗುವುದು. ಇದರ ತಯಾರಿ ಹೇಗೆಂದು ತಿಳಿಯಿರಿ.

ನಾಲ್ಕು ಮಂದಿ ಬಡಿಸಬಹುದಾದಷ್ಟು
ಅಡುಗೆ ಸಮಯ 45 ನಿಮಿಷ
ತಯಾರಿ ಸಮಯ 20 ನಿಮಿಷ

ಕಥಲ್ ಬಿರಿಯಾನಿ ಬೇಕಾಗುವ ಸಾಮಗ್ರಿಗಳು
500 ಗ್ರಾಂ ಬಾಸ್ಮತಿ ಅಕ್ಕಿ
500 ಗ್ರಾಂ ಹಸಿ ಹಲಸಿನ ಹಣ್ಣು
2 ಚಮಚ ಮೆಣಸಿನ ಹುಡಿ
2 ಚಮಚ ಅರಶಿನ ಹುಡಿ
1 ಚಮಚ ಕೊತ್ತಂಬರಿ ಹುಡಿ
1 ಚಮಚ ಕಡಲೆಹಿಟ್ಟು
2 ಕಪ್ ಮೊಸರು
250 ಮಿ.ಲೀ.ಎಣ್ಣೆ
2 ಚಮಚ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
2 ದಾಲ್ಚಿನಿ ಚಕ್ಕೆ
1 ಕರಿಬೇವಿ ಎಸಲು
3-4 ಏಲಕ್ಕಿ
2-3 ಹಸಿ ಮೆಣಸಿನ ಕಾಯಿ
15-20 ಪುದೀನಾ ಎಲೆ
10 ಗ್ರಾಂ ಕೇಸರಿ
ಉಪ್ಪು

ರೈತಾ ತಯಾರಿಗೆ
1 ಕಪ್ ಮೊಸರು
2 ಬೆಳ್ಳುಳ್ಳಿ ಎಸಲು
1 ಚಮಚ ಕೆಂಪು ಮೆಣಸಿನ ಹುಡಿ
1 ಚಮಚ ಹುರಿದ ಜೀರಿಗೆ
ಉಪ್ಪು


ಕಥಲ್ ಬಿರಿಯಾನಿ ಮಾಡುವ ವಿಧಾನ
*40 ನಿಮಿಷ ಕಾಲ ಅಕ್ಕಿ ನೆನೆಸಿಡಿ
*ಹಸಿ ಹಲಸಿನ ಕಾಯಿ ಕತ್ತರಿಸಿಕೊಂಡು ಅದಕ್ಕೆ ಉಪ್ಪು, ಕೆಂಪು ಮೆಣಸಿನ ಹುಡಿ, ಅರಶಿನ ಹುಡಿ, ಕೊತ್ತಂಬರಿ ಹುಡಿ ಮತ್ತು ಕಡಲೆಹಿಟ್ಟು ಹಾಕಿ ಮಿಶ್ರಣ ಮಾಡಿ.
*ಸ್ವಲ್ಪ ನೀರು ಚಿಮುಕಿಸಿ, ಆಳವಾಗಿ ಕರಿಯಿರಿ.
* ಒಂದು ಪಾತ್ರೆಗೆ ಮೊಸರು ಹಾಕಿ.
* ಕೆಂಪು ಮೆಣಸಿನ ಹುಡಿ, ಅರಶಿನ ಹುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ದಾಲ್ಚಿನಿ ಚಕ್ಕೆ, ಕರಿಬೇವಿನ ಎಲೆ, ಲವಂಗ, ಏಲಕ್ಕಿ, ಅಡ್ಡ ಕತ್ತರಿಸಿರುವ ಹಸಿ ಮೆಣಸು, ಪುದೀನಾ ಎಲೆಗಳು, ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿ.
*ಇದಕ್ಕೆ ಕರಿದ ಹಲಸಿನ ಕಾಯಿ ಹಾಕಿ ಕಲಸಿಕೊಳ್ಳಿ.
* ಉಪ್ಪು, ಏಲಕ್ಕಿ ಮತ್ತು ಎಣ್ಣೆ ಹಾಕಿ ಅಕ್ಕಿ ಬೇಯಿಸಿ.
*ಬೆಂದ ಅನ್ನ ತೆಗೆದು ಬಿರಿಯಾನಿ ಪದರ ಮಾಡಿ.
*ಇದಕ್ಕೆ ಕೇಸರಿ, ಎಣ್ಣೆ, ಅನ್ನ ಸೋಸಿ ತೆಗೆದ ನೀರು ಹಾಕಿ ಮತ್ತೆ 10 ನಿಮಿಷ ಬೇಯಿಸಿ.

ರೈತಾ ತಯಾರಿ
ಕಂದು ಬಣ್ಣಕ್ಕೆ ಬಂದ ಬೆಳ್ಳುಳ್ಳಿ ಎಸಲುಗಳು, ಕೆಂಪು ಮೆಣಸಿನ ಹುಡಿ ಮತ್ತು ಹುರಿದ ಜೀರಿಗೆಯನ್ನು ಮೊಸರಿಗೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ.