ಕೊತ್ತಂಬರಿ ಸೊಪ್ಪಿನ ಚಟ್ನಿ

ಕೊತ್ತಂಬರಿ ಸೊಪ್ಪಿನ ಚಟ್ನಿ

Jan 03, 2017 07:56:47 AM (IST)

ಊಟಕ್ಕೆ ಉಪ್ಪಿನಕಾಯಿ ಅಗತ್ಯವಾಗಿರುವಂತೆ ಚಟ್ನಿ ಕೂಡ ನಿಮ್ಮ ಊಟದ ರುಚಿ ಹೆಚ್ಚಿಸುತ್ತದೆ. ಹಲವಾರು ಸಾಮಾಗ್ರಿಗಳನ್ನು ಬಳಸಿಕೊಂಡು ವೈವಿಧ್ಯಮಯ ಚಟ್ನಿಯನ್ನು ತಯಾರಿಸಬಹುದು. ಸಿಹಿ ಹುಳಿ ಮಿಶ್ರಿತ ಹುಣಸೆ ಹಣ್ಣಿನ ಚಟ್ನಿಯಿಂದ ಹಿಡಿದು ಖಾರ ಹಸಿರು ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ತಯಾರಿಸಿಕೊಳ್ಳಬಹುದು. ಬನ್ನಿ ನಾವು ಇವತ್ತು ಕೊತ್ತಂಬರಿ ಸೊಪ್ಪಿನ ಚಟ್ನಿ ತಯಾರಿಸಿ ಸವಿಯೋಣ.

ಬೇಕಾಗುವ ಸಾಮಾಗ್ರಿಗಳು:
1.ಕೊತ್ತಂಬರಿ ಸೊಪ್ಪು - 1ಕಟ್ಟು
2.ಟೊಮೇಟೊ- 1 (ಸಮನಾಗಿ ಕತ್ತರಿಸಿದ್ದು)
3.ಬೆಳ್ಳುಳ್ಳಿ- 5-6 ಎಸಳು
4.ಹಸಿ ಮೆಣಸು-3-4
5.ಜೀರಿಗೆ - 1ಟೇಸ್ಪೂನ್
6.ಉಪ್ಪು-ರುಚಿಗೆ ತಕ್ಕಂತೆ

ತಯಾರಿಸುವ ವಿಧಾನ: ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದುಕೊಳ್ಳಿ. ಕೆಸರಿಲ್ಲದಂತೆ ಅದನ್ನು ಶುಭ್ರವಾಗಿಸಿ. ಕೊತ್ತಂಬರಿ ಸೊಪ್ಪು, ಟೊಮೇಟೊ, ಬೆಳ್ಳುಳ್ಳಿ, ಹಸಿಮೆಣಸು ಮತ್ತು ಜೀರಿಗೆಯನ್ನು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ರುಚಿಗೆ ತಕ್ಕಂತೆ ಉಪ್ಪು ಹಾಕಿ. ಪಾತ್ರೆಯಲ್ಲಿ ಸ್ವಲ್ಪ ನೀರು ಬೆರೆಸಿಕೊಂಡು ಮೃದುವಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ನಂತರ, ಅದನ್ನು ಖಾರ ಮತ್ತು ಹುಳಿಯನ್ನಾಗಿಸಲು 1ಟೇ.ಸ್ಪೂನ್ ನಿಂಬೆರಸವನ್ನು ಮಿಶ್ರ ಮಾಡಿಕೊಳ್ಳಿ. ಮಧ್ಯಾಹ್ನದ ಊಟದ ಜತೆ ಸವಿಯಲು ಚಟ್ನಿ ರುಚಿಕರವಾಗಿರುತ್ತದೆ.