ಕೊಡಗಿನ  ಸ್ಪೆಷಲ್ ತಂಬಿಟ್ಟು

ಕೊಡಗಿನ  ಸ್ಪೆಷಲ್ ತಂಬಿಟ್ಟು

LK   ¦    Nov 27, 2018 03:01:32 PM (IST)
ಕೊಡಗಿನ  ಸ್ಪೆಷಲ್ ತಂಬಿಟ್ಟು

ಕೊಡಗಿನಲ್ಲಿ ಮಾಡುವ ಸಾಂಪ್ರದಾಯಿಕ ತಿಂಡಿಯೇ ತಂಬಿಟ್ಟು. ಈ ತಂಬಿಟ್ಟು ಇತರೆಡೆಗಳಲ್ಲಿ ಮಾಡುವ ತಂಬಿಟ್ಟಿಗಿಂತ ವಿಭಿನ್ನ ಮತ್ತು ವಿಶೇಷವಾಗಿದೆ. ಈ ತಂಬಿಟ್ಟನ್ನು ಮಾಡಲು ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಇಲ್ಲಿದೆ. 

ಬೇಕಾಗುವ ಪದಾರ್ಥಗಳ ವಿವರ.. 

ಕುಸಲಕ್ಕಿ- ಒಂದುಕಪ್ 

ತುಪ್ಪ- 2ಚಮಚ 

ದ್ರಾಕ್ಷಿ- ಸ್ವಲ್ಪ 

ಗೋಡಂಬಿ- ಸ್ವಲ್ಪ 

ಎಳ್ಳು- ಕಾಲು ಕಪ್ 

ಏಲಕ್ಕಿ ಪುಡಿ- ಚಿಟಿಕೆಯಷ್ಟು 

ಪಚ್ಚೆಬಾಳೆಹಣ್ಣು- 4 

ಸಕ್ಕರೆ- ಸಿಹಿಗೆ ಬೇಕಾಗುವಷ್ಟು 

ಉಪ್ಪು- ರುಚಿಗೆ ತಕ್ಕಂತೆ 

ತೆಂಗಿನತುರಿ- ಅರ್ಧ ಕಪ್ 

ಹುರಿಗಡಲೆ- ಸ್ವಲ್ಪ 

ತಂಬಿಟ್ಟು ಮಾಡುವ ವಿಧಾನ ಹೀಗಿದೆ 

ಕುಸಲಕ್ಕಿಯನ್ನು ಕೆಂಪಗೆ ಹುರಿದುಕೊಂಡು ಬಳಿಕ ನುಣ್ಣಗೆ ಪುಡಿಮಾಡಿಕೊಳ್ಳಬೇಕು. ಆ ಪುಡಿಯನ್ನು ತೆಗೆದುಕೊಂಡು ಅದರೊಂದಿಗೆ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ಕಲೆಸಬೇಕು. ಬಾಳೆಹಣ್ಣು ಸಂಪೂರ್ಣ ಕರಗಿ ಅಕ್ಕಿಪುಡಿಯೊಂದಿಗೆ ಮಿಶ್ರವಾದ ಬಳಿಕ ಸಕ್ಕರೆ, ಕಾಯಿತುರಿ, ಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ ಇದಾದ ಬಳಿಕ ತುಪ್ಪದಲ್ಲಿ ಹುರಿದ  ದ್ರಾಕ್ಷಿ, ಗೋಡಂಬಿ ಹಾಕಿ, ಎಳ್ಳನ್ನು ಬಿಸಿ ಮಾಡಿ ಅದು ಸಿಡಿದ ಬಳಿಕ ಹಾಕಿ, ಜತೆಗೆ ಹುರಿಗಡಲೆಯನ್ನು ಹಾಕಿ ಮಿಶ್ರ ಮಾಡಿ ಬಳಿಕ ತಮಗೆ ಬೇಕಾದ ಅಳತೆಯಲ್ಲಿ ಉಂಡೆಗಳನ್ನು ಮಾಡಿದರೆ ಕೊಡಗಿನ ಹುತ್ತರಿ ತಂಬಿಟ್ಟು ಸವಿಯಲು ಸಿದ್ಧವಾದಂತೆಯೇ...