ಅನಾನಸು, ಕಿತ್ತಳೆ, ಸೋರೆಕಾಯಿ ಜ್ಯೂಸ್ ಕುಡಿದು ನೋಡಿ

ಅನಾನಸು, ಕಿತ್ತಳೆ, ಸೋರೆಕಾಯಿ ಜ್ಯೂಸ್ ಕುಡಿದು ನೋಡಿ

Oct 24, 2017 02:20:42 PM (IST)
ಅನಾನಸು, ಕಿತ್ತಳೆ, ಸೋರೆಕಾಯಿ ಜ್ಯೂಸ್ ಕುಡಿದು ನೋಡಿ

ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿರುವ ಅನಾನಸು, ಕಿತ್ತಳೆ ಮತ್ತು ಉದ್ದ ಸೋರೆ ಕಾಯಿಯ ಜ್ಯೂಸ್ ಮಾಡಿಕೊಂಡು ಸೇವಿಸಿದರೆ ಅದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುವುದು. ಈ ಮೂರರಲ್ಲಿ ಒಂದೊಂದು ರೀತಿಯ ಆರೋಗ್ಯಕಾರಿ ಅಂಶಗಳು ಇವೆ. ಇದು ಖಂಡಿತವಾಗಿಯೂ ನಿಮ್ಮ ದೇಹವನ್ನು ಕಾಯಿಲೆಗಳಿಂದ ರಕ್ಷಿಸುವುದು.

ಬೇಕಾಗುವ ಸಾಮಗ್ರಿಗಳು
ಒಂದು ಕಪ್ ತುಂಡರಿಸಿದ ಅನಾನಸು
ಒಂದು ಕಪ್ ಕಿತ್ತಳೆ ತುಂಡುಗಳು
ಒಂದು ಕಪ್ ಕತ್ತರಿಸಿಕೊಂಡಿರುವ ಸೋರೆಕಾಯಿ
ಒಂದು ಕಪ್ ತುಂಡರಿಸಿದ ಸೌತೆಕಾಯಿ
ಸ್ವಲ್ಪ ತುಳಸಿ ಎಲೆಗಳು
ಸ್ವಲ್ಪ ಕರಿಬೇವಿನ ಎಲೆಗಳು


ತಯಾರಿಸುವ ವಿಧಾನ
ಎಲ್ಲವನ್ನು ಜತಯಾಗಿ ಮಿಶ್ರಣ ಮಾಡಿಕೊಳ್ಳಿ.
ಹಣ್ಣುಗಳು ಮತ್ತು ತರಕಾರಿಯನ್ನು ಜತಯಾಗಿ ಜ್ಯೂಸರ್ ಗೆ ಹಾಕಿ ಜ್ಯೂಸ್ ಮಾಡಿಕೊಳ್ಳಿ.
ತುಳಸಿ ಮತ್ತು ಕರಿಬೇವಿನ ಎಲೆಗಳನ್ನು ರುಚಿಗೆ ಮೇಲೆ ಹಾಕಿಕೊಳ್ಳಿ.
ಸ್ವಲ್ಪ ನೀರು ಹಾಕಿ ಎಲ್ಲವನ್ನು ಸರಿಯಾಗಿ ರುಬ್ಬಿ ಜ್ಯೂಸ್ ತೆಗೆದು ಸೋಸಿಕೊಳ್ಳಿ.