ದೀರ್ಘಕಾಲದವರಗೆ ಶುಂಠಿ ಕೆಡದಂತೆ ಇಡಲು ಕಲಿಯಿರಿ

ದೀರ್ಘಕಾಲದವರಗೆ ಶುಂಠಿ ಕೆಡದಂತೆ ಇಡಲು ಕಲಿಯಿರಿ

HSA   ¦    Feb 08, 2018 02:10:58 PM (IST)
ದೀರ್ಘಕಾಲದವರಗೆ ಶುಂಠಿ ಕೆಡದಂತೆ ಇಡಲು ಕಲಿಯಿರಿ

ಅರ್ಜೆಂಟ್ ಆಗಿ ಏನಾದರೂ ಖಾದ್ಯ ಮಾಡಬೇಕೆಂದು ಅಡುಗೆ ಮನೆಗೆ ತೆರಳಿದಾಗ ಅಲ್ಲಿರುವ ಕೆಲವೊಂದು ತರಕಾರಿಗಳು ಅಥವಾ ಗಿಡಮೂಲಿಕೆಗಳು ಕೆಟ್ಟಿರುತ್ತದೆ. ನಿಮ್ಮ ಆಸೆಯೆಲ್ಲಾ ನಿರಾಸೆಯಾಗುತ್ತದೆ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಹೆಚ್ಚಾಗಿ ಪ್ರತಿಯೊಂದು ಅಡುಗೆಗೂ ಬೇಕಾಗುವಂತಹ ಶುಂಠಿಯನ್ನು ಕೆಡದಂತೆ ಇಡುವುದು ಹೇಗೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಮಾರುಕಟ್ಟೆಗೆ ಹೋದಾಗ ನೀವು ತುಂಬಾ ತಾಜಾವಾಗಿರುವಂತಹ ಶುಂಠಿ ಆಯ್ಕೆ ಮಾಡಿಕೊಳ್ಳಿ. ಇದರಿಂದ ಅದು ದೀರ್ಘಕಾಲ ತನಕ ಕೆಡದೆ ಉಳಿಯುವುದು. ಶುಂಠಿಯ ಸಿಪ್ಪೆಯು ಮೃಧುವಾಗಿರಲಿ ಮತ್ತು ಬೇರು ಭಾರವಾಗಿರಲಿ. ತುಂಬಾ ಮೃಧು ಮತ್ತು ನೆರಿಗೆ ಹೊಂದಿರುವ ಶುಂಠಿ ಖರೀದಿಸಲೇಬೇಡಿ. ತೇವಾಂಶವಿರುವ ಶುಂಠಿಯಿಂದ ದೂರವಿರಿ.

ಶುಂಠಿ ದೀರ್ಘಕಾಲ ಕೆಡದಂತೆ ಇಡುವುದು ಹೇಗೆ ಎಂದು ತಿಳಿಯಿರಿ.
1. ಫ್ರಿಡ್ಜ್ ನಲ್ಲಿ ಶುಂಠಿಯನ್ನು ಇಡುವ ಮೊದಲು ಅದನ್ನು ಪೇಪರ್ ಬ್ಯಾಗ್ ಅಥವಾ ಪೇಪರ್ ಟವೆಲ್ ನಲ್ಲಿ ಅದ್ದಿಡಿ. ಪೇಪರ್ ಬ್ಯಾಗ್ ನೊಳಗೆ ಗಾಳಿ ಹೋಗದಂತೆ ಅದನ್ನು ಮುಚ್ಚಿಕೊಳ್ಳಿ. ಇದರಿಂದ ಶುಂಠಿ ಕೆಡುವುದಿಲ್ಲ.
2. ಸಿಪ್ಪೆ ತೆಗೆದಿರುವಂತಹ ಶುಂಠಿಯನ್ನು ಲಿಂಬೆರಸ ಅಥವಾ ವಿನೇಗರ್ ಹಾಕಿ ಒಂದು ಜಾರ್ ನಲ್ಲಿ ಹಾಕಿಡಿ. ಇದು ತುಂಬಾ ಬಲಿಷ್ಠ ವಿಧಾನ. ಈ ವಿಧದಿಂದ ಶುಂಠಿಯ ರುಚಿ ಕೂಡ ಹೆಚ್ಚಾಗುವುದು.
3. ಶುಂಠಿಯ ಸಿಪ್ಪೆ ತೆಗೆದು ಅದನ್ನು ಕತ್ತರಿಸಿಕೊಳ್ಳಿ. ಇದನ್ನು ಟ್ರೈಯಲ್ಲಿಟ್ಟು ಫ್ರೀಜ್ ಆಗಲು ಬಿಡಿ. ಇದನ್ನು ತೆಗೆದು ಒಂದು ಗಾಳಿ ಹೋಗದ ಡಬ್ಬದೊಳಗೆ ಹಾಕಿಡಿ. ಈ ರೀತಿ ಶುಂಠಿಯನ್ನು ಅದರ ರುಚಿ ಕೆಡದಂತೆ ದೀರ್ಘ ಕಾಲ ಬಳಸಬಹುದು.
4. ಶುಂಠಿಯನ್ನು ಒಂದು ಗಾಳಿಹೋಗದಿರುವ ಬ್ಯಾಗ್ ಗೆ ಹಾಕಿಕೊಂಡು ಅದನ್ನು ಫ್ರಿಡ್ಜ್ ನಲ್ಲಿಡಿ. ಇದರಿಂದ ತಿಂಗಳ ಕಾಲ ಶುಂಠಿ ತಾಜಾವಾಗಿರುವುದು.

ಗಮನಿಸಬೇಕಾದ ಅಂಶಗಳು
*ಒಂದು ಸಲ ಶುಂಠಿಯ ಸಿಪ್ಪೆ ತೆಗೆದರೆ ಅಥವಾ ತುಂಡು ಮಾಡಿದರೆ ಅದನ್ನು ಕೋಣೆಯ ವಾತಾವರಣದಲ್ಲಿ ಹೆಚ್ಚು ಸಮಯ ಇಡಲು ಸಾಧ್ಯವಿಲ್ಲ. ಇದಕ್ಕಾಗಿ ತುಂಡು ಮಾಡಿದ ಬಳಿಕ ಫ್ರಿಡ್ಜ್ ನಲ್ಲಿಡಬೇಕು.
*ಫ್ರಿಡ್ಜ್ ನಲ್ಲಿ ಶುಂಠಿಯು ಮೂರು ವಾರಗಳ ತನಕ ಬಾಳಿಕೆ ಬರುವುದು. ಶುಂಠಿಗೆ ಗಾಳಿ ಅಥವಾ ನೀರು ತಾಗಲು ಬಿಡಬೇಡಿ.
* ಗಾಳಿಯಾಡದ ಡಬ್ಬದಲ್ಲಿ ಹಾಕಿ ಶುಂಠಿಯನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಅದು ಕೆಡುವುದಿಲ್ಲ.