ವೆಜ್ ಮಿಕ್ಸ್ ಪರೋಟ ಆರೋಗ್ಯಕ್ಕೂ ಹಿತ

ವೆಜ್ ಮಿಕ್ಸ್ ಪರೋಟ ಆರೋಗ್ಯಕ್ಕೂ ಹಿತ

LK   ¦    Oct 22, 2019 02:27:57 PM (IST)
ವೆಜ್ ಮಿಕ್ಸ್ ಪರೋಟ ಆರೋಗ್ಯಕ್ಕೂ ಹಿತ

ಸಾಮಾನ್ಯವಾಗಿ ಪರೋಟ ಸೇವಿಸಿದರೆ ಹಸಿವು ಸದ್ಯಕ್ಕೆ ಕಾಣಿಸುವುದಿಲ್ಲ. ಇನ್ನು ಅತಿಯಾಗಿ ಮೈದಾ ಹಿಟ್ಟಿನಿಂದ ತಯಾರು ಮಾಡುವ ಪರೋಟವು ಆರೋಗ್ಯಕ್ಕೆ ಹಿತ ನೀಡುವುದಿಲ್ಲ. ಹೀಗಾಗಿ ಮೈದಾದ ಬದಲಿಗೆ ಗೋಧಿ ಹಿಟ್ಟಿನೊಂದಿಗೆ ಇನ್ನೊಂದಷ್ಟು ತರಕಾರಿ ಸೇರಿದಂತೆ ಬೇರೆ ಬೇರೆ ಪದಾರ್ಥಗಳನ್ನು ಸೇರಿಸಿ ವೆಜ್ ಮಿಕ್ಸ್ ಪರೋಟ ತಯಾರು ಮಾಡಿದರೆ ನಾಲಿಗೆಗೆ ರುಚಿಯಾಗಿ ಆರೋಗ್ಯಕ್ಕೆ ಹಿತವಾಗಲಿದೆ.

ವೆಜ್ ಮಿಕ್ಸ್ ಪರೋಟ ತಯಾರಿಸಲು ಬೇಕಾಗುವ ಪದಾರ್ಥಗಳು ಹೀಗಿವೆ.

ಗೋಧಿ ಹಿಟ್ಟು- ಒಂದೂವರೆ ಕಪ್

ಕಡ್ಲೆಬೇಳೆ ಹಿಟ್ಟು- ಕಾಲು ಕಪ್

ಆಲೂಗೆಡ್ಡೆ- ಮುಕ್ಕಾಲು ಕಪ್

ಪಾಲಕ್ ಸೊಪ್ಪು- ಒಂದು ಕಪ್

ಹಸಿಮೆಣಸಿಕ ಕಾಯಿ- ಐದರಿಂದ ಆರು

ಕ್ಯಾರೆಟ್- ಕಾಲು ಕಪ್

ಮೊಸರು- ನಾಲ್ಕೈದು ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ಬೇಯಿಸಲು ಅಗತ್ಯವಿರುವಷ್ಟು

ಮಾಡುವ ವಿಧಾನ ಹೀಗಿದೆ..

ಮೊದಲಿಗೆ ಆಲೂಗೆಡ್ಡೆಯನ್ನು ಬೇಯಿಸಿಟ್ಟುಕೊಳ್ಳಬೇಕು, ಆ ನಂತರ ಪಾಲಕ್ ಸೊಪ್ಪು, ಹಸಿಮೆಣಸು, ಕ್ಯಾರೆಟ್ ಸೇರಿಸಿ ಮಿಕ್ಸಿ ಮಾಡಿಟ್ಟುಕೊಳ್ಳಬೇಕು. ಬಳಿಕ ಗೋಧಿ ಮತ್ತು ಕಡ್ಲೆ ಹಿಟ್ಟಿಗೆ ಎಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. ಹದಕ್ಕೆ ಬಂದ ಬಳಿಕ ಚಿಕ್ಕ ಪರೋಟ ರೀತಿ ತೀಡಿಕೊಂಡು ಬಳಿಕ ತಾವಾದಲ್ಲಿ ಸ್ವಲ್ಪ ಎಣ್ಣೆ ಹಾಕಿಕೊಂಡು ಎರಡು ಬದಿಯೂ ಚೆನ್ನಾಗಿ ಕಾಯಿಸಿ ತೆಗೆದರೆ ವೆಜ್ ಮಿಕ್ಸ್ ಪರೋಟ ರೆಡಿಯಾದಂತೆಯೇ...