ಆಲೂಚಿಕನ್ ಮಸಾಲ ಮಿಕ್ಸ್ ಫ್ರೈ

ಆಲೂಚಿಕನ್ ಮಸಾಲ ಮಿಕ್ಸ್ ಫ್ರೈ

LK   ¦    Oct 26, 2018 12:52:34 PM (IST)
ಆಲೂಚಿಕನ್ ಮಸಾಲ ಮಿಕ್ಸ್ ಫ್ರೈ

ಆಲೂಚಿಕನ್ ಮಿಕ್ಸ್ ಫ್ರೈ ಸವಿಯೋದಕ್ಕೆ ಮಜಾವಾಗಿರುತ್ತದೆ. ಆಲೂಗೆಡ್ಡೆ ಮಾಂಸದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವುದರಿಂದ ಇದೆರಡನ್ನು ಸೇರಿಸಿ ಮಸಾಲ ಮಿಕ್ಸ್ ಫ್ರೈ ಮಾಡಿದರೆ ರುಚಿಯಾಗಿರುತ್ತದೆ. ಇದನ್ನು ಹಾಗೆ ಅಥವಾ ಊಟಕ್ಕೆ ಸೈಡ್ ಆಗಿಯೂ ಬಳಸಬಹುದು.

ಇಷ್ಟಕ್ಕೂ ಆಲೂ ಚಿಕನ್ ಮಸಾಲ ಮಿಕ್ಸ್ ಫ್ರೈ ಮಾಡುವುದು ಹೇಗೆ ಮತ್ತು ಅದಕ್ಕೆ ಬಳಸುವ ಪದಾರ್ಥಗಳೇನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಬೇಕಾಗುವ ಪದಾರ್ಥಗಳು ಹೀಗಿದೆ: ಚಿಕನ್- ಅರ್ಧ ಕೆಜಿ

ಆಲೂಗೆಡ್ಡೆ- ಕಾಲು ಕೆಜಿ

ಅರಿಶಿಣ- ಮುಕ್ಕಾಲು ಚಮಚ

ಖಾರದಪುಡಿ-ಎರಡೂವರೆ ಚಮಚ

ಸಾಸಿವೆ- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಶುಂಠಿ, ಬೆಳ್ಳುಳ್ಳಿ ಪೇಸ್ಟ್- ಒಂದು ಚಮಚ

ಸೋಯಾಸಾಸ್- ಒಂದು ಚಮಚ

ಪುದಿನಾಸೊಪ್ಪು- ಸ್ವಲ್ಪ

ಕೊತ್ತಂಬರಿಸೊಪ್ಪು- ಅರ್ಧ ಕಟ್ಟು

ನಿಂಬೆರಸ- ರುಚಿಗೆ ತಕ್ಕಷ್ಟು

 

ಆಲೂಚಿಕನ್ ಮಿಕ್ಸ್ ಫ್ರೈ ಮಾಡುವ ವಿಧಾನ

ಮೊದಲಿಗೆ ಒಂದು ಪಾತ್ರೆಯಲ್ಲಿ ನೀರಿಟ್ಟು ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಸಿಪ್ಪೆ ಸಹಿತ ಆಲೂಗೆಡ್ಡೆಯನ್ನು ಬೇಯಿಸಿ, ನಂತರ ಸಿಪ್ಪೆ ತೆಗೆದು ತಮಗೆ ಹೇಗೆ ಬೇಕೋ ಹಾಗೆ ತುಂಡು ಮಾಡಿಕೊಂಡು ಅದಕ್ಕೆ ಶುಂಠಿಪೇಸ್ಟ್ ಮಿಕ್ಸ್ ಮಾಡಿಕೊಳ್ಳಬೇಕು.

ಇನ್ನೊಂದೆಡೆ ಮಾಂಸವನ್ನು ಚೆನ್ನಾಗಿ ತೊಳೆದು ಅದಕ್ಕೆ ಅರಿಶಿನ, ಖಾರದಪುಡಿ, ಉಪ್ಪು ಹಾಕಿ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಆ ನೀರು ಆವಿಯಾಗಿ ಹೋಗುವ ತನಕ ಬೇಯಿಸಿಟ್ಟುಕೊಳ್ಳಿ.

ಆ ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಂತೆಯೇ ಸಾಸಿವೆ ಹಾಕಿ ಅದು ಸಿಡಿದ ಬಳಿಕ ಆಲೂಗೆಡ್ಡೆಯನ್ನು ಹಾಕಿ ಚೆನ್ನಾಗಿ ಹುರಿಯಿರಿ ಆನಂತರ ಅದಕ್ಕೆ ಚಿಕನ್ ತುಂಡುಗಳನ್ನು ಸೇರಿಸಿ, ಅದಕ್ಕೆ ಸೋಯಾಸಾಸ್ ಹಾಕಿ ನಿಧಾನ ಉರಿಯಲ್ಲಿ ಹುರಿಯುತ್ತಾ ಹೋಗಬೇಕು ಕಂದು ಬಣ್ಣಕ್ಕೆ ತಿರುಗಿದಾಗ ಅದಕ್ಕೆ ಪುದಿನಾ ಮತ್ತು ಕೊತ್ತಂಬರಿ ಎಲೆ ಉದುರಿಸಿ ನಿಂಬೆ ಹಣ್ಣಿನ ರಸ ಹಾಕಬೇಕು. ಜತೆಗೆ ರುಚಿನೋಡಿ ಏನು ಉಪ್ಪು ಕಡಿಮೆಯಾಗಿದ್ದರೆ ಹಾಕಿ ಚೆನ್ನಾಗಿ ತಿರುಗಿಸಿ ಇಳಿಸಿದರೆ ಆಲೂಚಿಕನ್ ಮಿಕ್ಸ್ ಫ್ರೈ ರೆಡಿಯಾದಂತೆಯೇ.