ರುಚಿಯಾದ ಆಲೂ ಸಮೋಸ ನೀವೇ ಮಾಡಿಬಿಡಿ

ರುಚಿಯಾದ ಆಲೂ ಸಮೋಸ ನೀವೇ ಮಾಡಿಬಿಡಿ

LK   ¦    May 05, 2018 01:46:19 PM (IST)
ರುಚಿಯಾದ ಆಲೂ ಸಮೋಸ ನೀವೇ ಮಾಡಿಬಿಡಿ

ಸಮೋಸ ಯಾರಿಗೆ ಗೊತ್ತಿಲ್ಲ ಹೇಳಿ? ಎಲ್ಲರಿಗೂ ಗೊತ್ತಿದೆ. ಈ ಸಮೋಸವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದಾಗಿದ್ದು, ಅದರಲ್ಲಿಯೂ ಆಲೂ ಸಮೋಸ ತಯಾರಿಸಲು ಸುಲಭ ಹಾಗೂ ರುಚಿಕರವೂ ಹೌದು. ಹಾಗಾದರೆ ಆಲೂ ಸಮೋಸ ಮಾಡುವುದು ಹೇಗೆ ಎಂದು ತಿಳಿಯುವ ಆಸಕ್ತಿ ಇದೆಯಾ ಇಲ್ಲಿದೆ ಅದನ್ನು ಮಾಡುವ ವಿಧಾನ.

ಬೇಕಾಗುವ ಪದಾರ್ಥಗಳ ವಿವರ

ಬೇಯಿಸಿ ಪುಡಿಮಾಡಿದ ಆಲೂಗೆಡ್ಡೆ: ಒಂದು ಕಪ್

ಮೈದಾಹಿಟ್ಟು: ಅರ್ಧ ಕಪ್

ಚಿರೋಟಿ ರವೆ: ಅರ್ಧ ಕಪ್

ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ: ಒಂದು ಕಪ್

ಖಾರದ ಪುಡಿ: ಒಂದು ಚಮಚ

ಗರಂಪುಡಿ: ಒಂದು ಚಮಚ

ಎಣ್ಣೆ: ಕರಿಯಲು ಅಗತ್ಯವಿರುವಷ್ಟು


ಮಾಡುವ ವಿಧಾನ ಹೀಗಿದೆ...

ಮೊದಲಿಗೆ ಮೈದಾಹಿಟ್ಟು, ರವೆ, ರುಚಿಗೆ ತಕ್ಕಷ್ಟು ಉಪ್ಪು, ಬಿಸಿ ಮಾಡಿದ ಎರಡು ಚಮಚ ಎಣ್ಣೆ ಎಲ್ಲ ಸೇರಿಸಿ ಅದಕ್ಕೆ ಸ್ವಲ್ಪ ನೀರು ಹಾಕಿ ಹದವಾಗಿ(ಚಪಾತಿ ಹಿಟ್ಟಿನಂತೆ) ಕಲಸಿ ಒಂದೆಡೆ ಮುಚ್ಚಿಡಬೇಕು.

ಇನ್ನೊಂದೆಡೆ ಒಲೆಯಲ್ಲಿ ಪಾತ್ರೆಯಿಟ್ಟು ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಖಾರದಪುಡಿ ಬೆಂದ ಆಲೂಗೆಡ್ಡೆಯನ್ನು ಹಾಕಿ ಸೇರಿಸಿ ಪಲ್ಯ ತಯಾರಿಸಿಕೊಳ್ಳಬೇಕು. ಆ ನಂತರ ಕಲಸಿದ ಹಿಟ್ಟನ್ನು ಸಣ್ಣದಾಗಿ ಲಟ್ಟಿಸಿ ಅರ್ಧಕ್ಕೆ ಕತ್ತರಿಸಿ ಕೋನ್ ನಂತೆ ಮಡಚಿ ಅರದೊಳಗೆ ಎರಡು ಚಮಚ ಪಲ್ಯವನ್ನು ಹಾಕಬೇಕು ಬಳಿಕ ಅಂಚುಗಳನ್ನು ಒತ್ತಿ ಬಿಗಿಮಾಡಿ ಎಣ್ಣೆಯಲ್ಲಿ ಕರಿದು ತೆಗೆದರೆ ಆಲೂ ಸಮೋಸ ರೆಡಿ.