ಫೇಮಸ್ ಮದ್ದೂರು ವಡೆ ರುಚಿ ನೋಡಬೇಕೇ?

ಫೇಮಸ್ ಮದ್ದೂರು ವಡೆ ರುಚಿ ನೋಡಬೇಕೇ?

HSA   ¦    Jan 18, 2020 04:12:37 PM (IST)
ಫೇಮಸ್ ಮದ್ದೂರು ವಡೆ ರುಚಿ ನೋಡಬೇಕೇ?

ಒಂದೊಂದು ಊರಿಗೆ ಯಾವುದಾದರೂ ತಿಂಡಿ ಅಥವಾ ಅಡುಗೆಯು ತುಂಬಾ ಜನಪ್ರಿಯ. ಉದಾಹರಣೆಗೆ ಮೈಸೂರು ಪಾಕ್ ಎಂದರೆ ಅದು ಇಂದು ವಿಶ್ವಮಟ್ಟದಲ್ಲಿ ಜನಪ್ರಿಯವಾಗಿದೆ. ಅದೇ ರೀತಿಯಲ್ಲಿ ಮದ್ದೂರು ವಡೆ ಕೂಡ ಜನಪ್ರಿಯ. ಇದನ್ನು ತಯಾರಿಸುವುದು ಹೇಗೆ ಎಂದು ತಿಳಿಯುವ.

ಬೇಕಾಗುವ ಸಾಮಗ್ರಿಗಳು(ನಾಲ್ಕು ಜನರಿಗೆ ಆಗುವಷ್ಟು)

½ ಕಪ್ ಮೈದಾ

¼ ಕಪ್ ಅಕ್ಕಿ ಹಿಟ್ಟು

¼ ಕಪ್ ರವಾ

1 ಮಧ್ಯಮ ಗಾತ್ರದ ಈರುಳ್ಳಿ

1-2 ಹಸಿ ಮೆಣಸು

¼ ಚಮಚ ಸಣ್ಣಗೆ ತುಂಡರಿಸಿದ ಶುಂಠಿ

1 ಚಮಚ ಕತ್ತರಿಸಿಕೊಂಡ ಕರಿಬೇವಿನೆಲೆ

1 ಚಮಚ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು

ಒಂಟು ಚಿಟಕೆ ಇಂಗು

2 ಚಮಚ ತುಪ್ಪ ಅಥವಾ ಬಿಸಿ ಎಣ್ಣೆ

ರುಚಿಗೆ ತಕ್ಕಷ್ಟು ಉಪ್ಪು

ಕರಿಯಲು ಎಣ್ಣೆ

 ತಯಾರಿಸುವ ವಿಧಾನ

  • ಮೈದಾನ, ಅಕ್ಕಿಹಿಟ್ಟು ಮತ್ತು ರವಾವನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ. ಇದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ. ಇದರ ಬಳಿಕ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿ.
  • ಇದಕ್ಕೆ ಇಂಗು, ಕತ್ತರಿಸಿಕೊಂಡ ಈರುಳ್ಳಿ, ಕರಿಬೇವಿನ ಎಲೆ, ಕೊತ್ತಂಬರಿ ಸೊಪ್ಪು, ಹಸಿ ಮೆಣಸು ಮತ್ತು ಶುಂಠಿ ಹಾಕಿ.
  • ನೀರು ಹಾಕದೆ ಹಾಗೆ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ ಮತ್ತು ಹತ್ತು ನಿಮಿಷ ಕಾಲ ಹಾಗೆ ಬಿಡಿ.
  • ಹತ್ತು ನಿಮಿಷ ಬಳಿಕ ಸ್ವಲ್ಪ ನೀರು ಚಿಮುಕಿಸಿ ಮತ್ತು ಹಾಗೆ ದಪ್ಪಗಿನ ಉಂಡೆ ಮಾಡಿ.
  • ಸಣ್ಣ ಗಾತ್ರದ ಉಂಡೆ ಮಾಡಿಕೊಂಡು ಅದಕ್ಕೆ ಎಣ್ಣೆ ಹಚ್ಚಿಕೊಳ್ಳಿ.
  • ಇದರ ಬಳಿಕ ನಿಮ್ಮ ಅಂಗೈಗೆ ಎಣ್ಣೆ ಹಚ್ಚಿಕೊಂಡು ಚಪ್ಪಟೆ ಮಾಡಿಕೊಳ್ಳಿ.
  • ಕರಿಯಲು ಎಣ್ಣೆಯನ್ನು ಗ್ಯಾಸ್ ಮೇಲಿಡಿ. ಇದರ ಬಳಿಕ ಒಂದೊಂದೇ ವಡೆಯನ್ನು ಎಣ್ಣೆಯಲ್ಲಿ ನಿಧಾನವಾಗಿ ಕರಿಯಿರಿ.
  • ಇದು ತಿನ್ನಲು ತುಂಬಾ ರುಚಿಕರವಾಗಿದೆ ಮತ್ತು ತೆಂಗಿನ ಚಟ್ನಿ ಮತ್ತು ಚಾ ಜತೆಗೆ ಸವಿಯಿರಿ.