ಸೋಯಾ ಕಬಾಬ್ ಮಾಡಿ ನೋಡಿ...

ಸೋಯಾ ಕಬಾಬ್ ಮಾಡಿ ನೋಡಿ...

LK   ¦    Apr 11, 2019 12:05:23 PM (IST)
ಸೋಯಾ ಕಬಾಬ್ ಮಾಡಿ ನೋಡಿ...

ಚಿಕನ್ ಕಬಾಬ್ ಸೇವಿಸಿದವರಿಗೆ ಇದ್ಯಾವುದಪ್ಪಾ ಸೋಯಾ ಕಬಾಬ್ ಎಂಬ ಅಚ್ಚರಿಯಾಗಬಹುದು. ಆದರೆ ಸೋಯಾ ಕಬಾಬ್ ಕೂಡ ರುಚಿಯಾಗಿರುತ್ತದೆ ಎಂಬುದು ಅಷ್ಟೇ ಸತ್ಯ. ಹಾಗಾದರೆ ಸೋಯಾ ಕಬಾಬ್ ಮಾಡುವುದು ಹೇಗೆ ಎಂಬ ಕುತೂಹಲ ಕಾಡಲಾರಂಭಿಸಿರಬಹುದಲ್ಲವೆ? ಅದರ ವಿವರ ಇಲ್ಲಿದೆ.

ಸೋಯಾ ಕಬಾಬ್ ಮಾಡಲು ಬೇಕಾಗುವ ಪದಾರ್ಥಗಳು ಹೀಗಿದೆ.

ಆಲೂಗೆಡ್ಡೆ-3

ತರಕಾರಿ- ಒಂದು ಕಪ್

ಸೋಯಾ ಫ್ಲೋರ್- ಒಂದು ಕಪ್

ರವೆ- ಎರಡು ಚಮಚ

ಹಸಿಮೆಣಸು-2

ಬೆಳ್ಳುಳ್ಳಿ, ಶುಂಠಿ- ಒಂದು ಚಮಚ

ಚೀಸ್- 2 ಚಮಚ

ಕೊತ್ತಂಬರಿ- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ರವೆ- ಸ್ವಲ್ಪ


ಸೋಯಾ ಕಬಾಬ್ ಮಾಡುವುದು ಹೇಗೆ?

ಮೊದಲಿಗೆ ಆಲೂಗೆಡ್ಡೆ ಬೇಯಿಸಿಕೊಳ್ಳಿ ಹಾಗೆಯೇ ತರಕಾರಿಗಳನ್ನು ಬೇಯಿಸಿಕೊಳ್ಳಿ. ಬೇಯಿಸಿದ ಆಲೂಗೆಡ್ಡೆಯನ್ನು ಪುಡಿಮಾಡಿಕೊಳ್ಳಿ ಅದಕ್ಕೆ ಮೆಣಸಿನ ಕಾಯಿ ಪೇಸ್ಟ್ ಮಾಡಿಕೊಂಡು ಜತೆಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಆ ನಂತರ ಒಂದು ಅಗಲವಾದ ಪಾತ್ರೆಗೆ ಎಲ್ಲ ಸಾಮಾಗ್ರಿಗಳನ್ನು ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಬೇಕು.

ಆ ನಂತರ ಕಬಾಬ್ ಆಕಾರದಲ್ಲಿ ಮಾಡಿಕೊಂಡು ಅದನ್ನು ರವೆಯಲ್ಲಿ ಉರುಳಾಡಿಸಿ ಎಣ್ಣೆಯಲ್ಲಿ ಹಾಕಿ ಕರೆದರೆ ಸೋಯಾ ಕಬಾಬ್ ರೆಡಿಯಾದಂತೆಯೇ.. ಸಾಸ್ ನೊಂದಿಗೆ ಸೇವಿಸಲು ಮಜಾವಾಗಿರುತ್ತದೆ.