ಬೆಳಗ್ಗಿನ ತಿಂಡಿಗೆ ಹೀರೆಕಾಯಿ ದೋಸೆ

ಬೆಳಗ್ಗಿನ ತಿಂಡಿಗೆ ಹೀರೆಕಾಯಿ ದೋಸೆ

LK   ¦    Dec 10, 2018 01:01:43 PM (IST)
ಬೆಳಗ್ಗಿನ ತಿಂಡಿಗೆ ಹೀರೆಕಾಯಿ ದೋಸೆ

ಇತ್ತೀಚೆಗೆ ದೋಸೆ ಇಡ್ಲಿಗಳನ್ನು ತರಕಾರಿ ಸೇರಿಸಿ ಮಾಡೋದು ಹೆಚ್ಚು ಜನಪ್ರಿಯವಾಗಿದೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ. ಇದೇ ರೀತಿ ಹೀರೆಕಾಯಿ ದೋಸೆಯನ್ನು ಕೂಡ ಮಾಡಬಹುದಾಗಿದ್ದು, ಬಿಸಿಯಾಗಿದ್ದಾಗಲೇ ಬೆಣ್ಣೆ ಹಾಕಿಕೊಂಡು ಚಟ್ನಿಯಲ್ಲಿ ಸೇವಿಸಿದರೆ ಅದರ ಮಜಾವೇ ಬೇರೆಯಾಗಿರುತ್ತದೆ. 

ಇಷ್ಟಕ್ಕೂ ಹೀರೆಕಾಯಿ ದೋಸೆ ಮಾಡುವುದು ಕಷ್ಟವೇನಲ್ಲ. ಬಹು ಸುಲಭವೇ. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆಯ ಕಾಫಿಗೆ ಇದನ್ನು ಸೇವಿಸಬಹುದಾಗಿದೆ. ಹಾಗಾದರೆ ಹೀರೆಕಾಯಿ ದೋಸೆಗೆ ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನ ಇಲ್ಲಿದೆ. 

ಬೇಕಾಗುವ ಪದಾರ್ಥಗಳು ಹೀಗಿದೆ: 

ಹೀರೆಕಾಯಿ-1 

ಬೇಸನ್ ಪೌಡರ್- 3ಕಪ್ 

ಇಂಗು- ಚಿಟಿಕೆಯಷ್ಟು 

ಉಪ್ಪು- ರುಚಿಗೆ ತಕ್ಕಂತೆ 

ಕಾರದಪುಡಿ- ಸ್ವಲ್ಪ 

ಜೀರಿಗೆ-1ಚಮಚ 

ಎಣ್ಣೆ-ಸ್ವಲ್ಪ 

ಬೆಣ್ಣೆ- ಅಗತ್ಯಕ್ಕೆ ತಕ್ಕಂತೆ

 

ಹೀರೆಕಾಯಿದೋಸೆ ಮಾಡುವ ವಿಧಾನ ಹೀಗಿದೆ: ಮೊದಲಿಗೆ ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿ ಅದನ್ನು ಮಿಕ್ಸಿ ಮಾಡಿಕೊಳ್ಳಬೇಕು.

ಬಳಿಕ ತೆಗೆದು ಅದಕ್ಕೆ  ಬೇಸನ್, ಜೀರಿಗೆ, ಉಪ್ಪು, ಇಂಗು, ಕಾರದ ಪುಡಿ ಹಾಕಿ ಮಿಕ್ಸ್ ಮಾಡಿ ದೋಸೆ ಹಿಟ್ಟಿನಷ್ಟು ಹದ ಮಾಡಿಕೊಂಡು ತಾವಾದಲ್ಲಿ ಎಣ್ಣೆ ಸವರಿ ಹೊಯ್ಯಿರಿ. ನಿಧಾನ ಉರಿಯಲ್ಲಿ ಚೆನ್ನಾಗಿ ಬೇಯಿಸಿ ತೆಗೆಯಿರಿ ಅದರ ಮೇಲೆ ಬೆಣ್ಣೆ ಹಾಕಿ ಚಟ್ನಿಯೊಂದಿಗೆ ಸವಿಯಿರಿ. ಮಜಾ ಇರುತ್ತದೆ.