ಪಪ್ಪಾಯಿ ಕಬಾಬ್ ರುಚಿ ಎಂದಾದರೂ ಸವಿದಿದ್ದೀರಾ?

ಪಪ್ಪಾಯಿ ಕಬಾಬ್ ರುಚಿ ಎಂದಾದರೂ ಸವಿದಿದ್ದೀರಾ?

Oct 20, 2017 02:16:16 PM (IST)
ಪಪ್ಪಾಯಿ ಕಬಾಬ್ ರುಚಿ ಎಂದಾದರೂ ಸವಿದಿದ್ದೀರಾ?

ಪಪ್ಪಾಯಿಯು ಅಧಿಕ ಆರೋಗ್ಯ ಅಂಶಗಳನ್ನು ಹೊಂದಿಕೊಂಡು ಸಮೃದ್ಧವಾಗಿದ್ದು, ಇದು ಹಲವಾರು ರೀತಿ ಕಾಯಿಲೆಗಳು ಬರದಂತೆ ತಡೆಯುವುದು. ಹಸಿ ಪಪ್ಪಾಯಿ ಸೇವನೆ ಮಾಡುವುದು ಒಳ್ಳೆಯದು. ಯಾಕೆಂದರೆ ಇದರಲ್ಲೂ ಹಲವಾರು ಆರೋಗ್ಯ ಗುಣಗಳು ಇವೆ. ಗರ್ಭಿಣಿಯರು ಮಾತ್ರ ಹಸಿ ಪಪ್ಪಾಯಿ ಸೇವಿಸಲೇಬಾರದು. ಆದರೆ ಇಲ್ಲಿ ಹೇಳಲು ಹೊರಟಿರುವುದು ಹಸಿ ಪಪ್ಪಾಯಿಯಿಂದ ಮಾಡಬಹುದಾದ ಕಬಾಬ್ ಬಗ್ಗೆ. ನೀವು ಹಲವಾರು ರೀತಿಯ ಕಬಾಬ್ ಸವಿದಿರಬಹುದು. ಪಪ್ಪಾಯಿ ಕಬಾಬ್ ತಯಾರಿಸಿ ರುಚಿ ನೋಡಿ.

ನಾಲ್ಕು ಮಂದಿಗೆ ಆಗುವಷ್ಟು
ತಯಾರಿಸುವ ಸಮಯ: 10 ನಿಮಿಷ
ಅಡುಗೆ ಸಮಯ: 45 ನಿಮಿಷ

ಹಸಿ ಪಪ್ಪಾಯಿ ಕಬಾಬ್ ನೊಂದಿಗೆ ಆಲೂ ಭುಖರ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು
3 ಬಟಾಟೆ
1 ಹಸಿ ಪಪ್ಪಾಯಿ
1 ಚಮಚ ಅರಶಿನ ಹುಡಿ
1 ಚಮಚ ಮೆಣಸಿನ ಹುಡಿ
1 ಡಜನ್ ಪ್ಲಮ್ಸ್
2 ನಕ್ಷತ್ರ ಸೋಂಪುಗಿಡ
1 ಮಧ್ಯಮ ಗಾತ್ರದ ಶುಂಠಿ
1 ಚಮಚ ಹುರಿದ ಜೀರಿಗೆ
50 ಗ್ರಾಂ ಕೊತ್ತಂಬರಿ
2-3 ಚಮಚ ಕಡಲೆಹಿಟ್ಟು
5 ಹಸಿ ಮೆಣಸು
1 ಚಮಚ ಕಪ್ಪು ಉಪ್ಪು
1 ಚಮಚ ಕರಿಮಣಸಿನ ಹುಡಿ
1 ಚಮಚ ದೇಶಿ ತುಪ್ಪ
ಉಪ್ಪು

ತಯಾರಿಸುವ ವಿಧಾನ
*ಪಪ್ಪಾಯಿ ಮತ್ತು ಬಟಾಟೆ ತುರಿದುಕೊಳ್ಳಿ.
*ತುರಿದುಕೊಂಡ ಪಪ್ಪಾಯಿ ಮತ್ತು ಬಟಾಟೆಗೆ ಉಪ್ಪು, ಅರಶಿನ ಹುಡಿ, ಮೆಣಸಿನ ಹುಡಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ.
*ಹತ್ತು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರನ್ನು ಸರಿಯಾಗಿ ಸೋಸಿಕೊಳ್ಳಿ.
*ಕತ್ತರಿಸಿಕೊಂಡ ಶುಂಠಿ, ಹಸಿ ಮೆಣಸು, ಹುರಿದುಕೊಂಡ ಜೀರಿಗೆ, ಕೊತ್ತಂಬರಿ ಮತ್ತು ಕಡಲೆಹಿಟ್ಟು ಹಾಕಿ.
* ಸರಿಯಾಗಿ ಮಿಶ್ರಣ ಮಾಡಿ ಉಂಡೆ ಮಾಡಿ ಮತ್ತು ಅಂಗೈಯಿಂದ ಒತ್ತಿ.
* ಒಂದು ತವಾಗೆ ತುಪ್ಪ ಹಾಕಿ ಬಿಸಿಯಾಗಲು ಬಿಡಿ.
*ಈಗ ಕಬಾಬ್ ನ್ನು ಹದ ಕಂದು ಬಣ್ಣಕ್ಕೆ ಬರುವ ತನಕ ಕಾಯಿಸಿ. ಎರಡು ಬದಿ ತಿರುಗಿಸಿಕೊಳ್ಳಿ.

ಚಟ್ನಿ ತಯಾರಿಸುವುದು
*ಪ್ಲಮ್ಸ್ ತುಂಡು ಮಾಡಿಕೊಳ್ಳಿ. ಇದಕ್ಕೆ ಸಕ್ಕರೆ, ಸೋಂಪು ಹಾಕಿ ಮತ್ತು ಪಾತ್ರೆಗೆ ಹಾಕಿ ಹದ ಬೆಂಕಿಯಲ್ಲಿಡಿ. ಮುಚ್ಚಲ ಮುಚ್ಚಿಕೊಳ್ಳಿ.
*ಇದು ಬೆಂದ ಬಳಿಕ ತಣ್ಣಗಾಗಲು ಬಿಡಿ. ಬಳಿಕ ಸ್ವಲ್ಪ ಕಪ್ಪು ಉಪ್ಪು ಮತ್ತು ಕರಿಮೆಣಸಿನ ಹುಡಿ ಹಾಕಿ.
*ತಣ್ಣಗಾದ ಬಳಿಕ ಕಬಾಬ್ ಜತೆ ಸವಿಯಿರಿ.