'ವಾಂಗಿಬಾತ್' ಮಾಡೋದು ಈಗ ತುಂಬಾ ಸುಲಭ

'ವಾಂಗಿಬಾತ್' ಮಾಡೋದು ಈಗ ತುಂಬಾ ಸುಲಭ

BML   ¦    Apr 10, 2018 03:33:01 PM (IST)
'ವಾಂಗಿಬಾತ್' ಮಾಡೋದು ಈಗ ತುಂಬಾ ಸುಲಭ

ಬಾತ್‍ ಗಳಲ್ಲಿ ಹಲವು ವಿಧಗಳಿದ್ದು, ಅದರಲ್ಲಿ ವಾಂಗಿಬಾತ್ ಕೂಡ ಒಂದು. ಈ ವಾಂಗಿಬಾತ್ ಅನ್ನು ಸುಲಭವಾಗಿ ಮಾಡಬಹುದಾಗಿದೆ. ಈ ವಾಂಗಿಬಾತ್ ಅನ್ನು ಹೇಗೆ ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಮಾಡುವ ವಿಧಾನ ಇಲ್ಲಿದೆ.

ವಾಂಗಿಬಾತ್ ಗೆ ಬೇಕಾಗುವ ಸಾಮಾಗ್ರಿಗಳು

ಬದನೆಕಾಯಿ- ಚಿಕ್ಕ ಚೂರುಗಳು

ಬ್ಯಾಡಗಿ ಮೆಣಸಿನಕಾಯಿ- 100ಗ್ರಾಂ

ಗುಂಟೂರು ಮೆಣಸು- 10

ಕೊತ್ತಂಬರಿ ಬೀಜ- ಒಂದು ಹಿಡಿ

ಉದ್ದಿನ ಬೇಳೆ- 50 ಗ್ರಾಂ

ಕಡ್ಲೆ ಬೇಳೆ- 3 ಚಮಚ

ಚಕ್ಕೆ- ಚಿಕ್ಕದಾದ ಚೂರುಗಳು

ಗಸಗಸೆ- 2 ಚಮಚ

ಲವಂಗ-2

ಒಣ ಕೊಬ್ಬರಿ- ಒಂದು ಬಟ್ಟಲು

ಮಾಡುವ ವಿಧಾನ ಹೀಗಿದೆ...

ಮೊದಲಿಗೆ ಒಲೆಯ ಮೇಲೆ ಪಾತ್ರೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ನಿಧಾನ ಉರಿಯಲ್ಲಿ ಮೇಲೆ ಹೇಳಿದ ಪದಾರ್ಥಗಳನ್ನು ಹಾಕಿ ಹುರಿಯಿರಿ ಹೀಗೆ ಹುರಿಯುವಾಗ ಕೊನೆಯಲ್ಲಿ ಗಸಗಸೆ ಮತ್ತು ಕೊಬ್ಬರಿ ತುರಿ ಹಾಕಬೇಕು. ಹೀಗೆ ಹುರಿದ ಪದಾರ್ಥಗಳನ್ನು ಇಳಿಸಿಟ್ಟು ತಣ್ಣಗಾದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಬೇಕು.

ಕೊನೆಗೆ ಪಾತ್ರೆಯಲ್ಲಿ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಅದು ಬಿಸಿಯಾಗುತ್ತಿದ್ದಂತೆಯೇ ಸಾಸಿವೆ ಹಾಗೂ ಕರಿಬೇವು ಹಾಕಿ ಬಾಡಿಸಿ ಬಳಿಕ ಅದಕ್ಕೆ ಬದನೆ ಕಾಯಿ ಚೂರುಗಳನ್ನು ಹಾಕಿ ಚೆನ್ನಾಗಿ ಎಣ್ಣೆಯಲ್ಲಿ ಬೇಯಿಸಬೇಕು. ಚೆನ್ನಾಗಿ ಬೆಂದ ಬಳಿಕ ಮೊದಲು ಮಿಕ್ಸ್ ಮಾಡಿಟ್ಟುಕೊಂಡ ವಸ್ತುಗಳನ್ನು ಹಾಕಿ ಚೆನ್ನಾಗಿ ಕದಡಿ ಅದಕ್ಕೆ ಅನ್ನವನ್ನು ಮಿಕ್ಸ್ ಮಾಡಿದರೆ ವಾಂಗಿಬಾತ್ ಸೇವಿಸಲು ರೆಡಿ.